Connect with us

LATEST NEWS

ಕೇರಳದಲ್ಲಿ ಮತ್ತೆ ಸಕ್ರೀಯರಾದ ನಕ್ಸಲರು : ಕಣ್ಣೂರು ಅರಣ್ಯ ಪಾಲಕರ ಮೇಲೆ ಗುಂಡಿನ ದಾಳಿ..!

ಕಣ್ಣೂರು : ಕೇರಳದಲ್ಲಿ ನಕ್ಸಲರು ಮತ್ತೆ ಸಕ್ರೀಯರಾಗಿದ್ದು ಕಣ್ಣೂರಿನ ಆರಳಂ ವನ್ಯಜೀವಿ ಕೇಂದ್ರದ ಚಾವಚ್ಚದಲ್ಲಿ ಅರಣ್ಯ ಪಾಲಕರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.


5 ಜನ ಮಾವೋವಾದಿಗಳ ತಂಡ ಈ ದಾಳಿ ನಡೆಸಿದ್ದು ಇವರನ್ನು ಪತ್ತೆಹಚ್ಚಲು ತೀವ್ರ ಶೋಧ ಕಾರ್ಯ ನಡೆಯುತ್ತಿದೆ.
ನರಿಕ್ಕಡವು ಅರಣ್ಯ ಠಾಣೆಯಿಂದ ಅಂಬಲಪ್ಪರ ಕ್ಯಾಂಪ್ ಶೆಡ್‌ಗೆ ತೆರಳುತ್ತಿದ್ದ ವೇಳೆ ಎಬಿನ್, ಸಿಜೋ ಮತ್ತು ಬೋಬಸ್ ಎಂಬ ಮೂವರು ಅರಣ್ಯ ಪಾಲಕರ ಮೇಲೆ ನಕ್ಸಲರ ತಂಡ ಗುಂಡಿನ ದಾಳಿ ನಡೆಸಿದೆ.
ಪ್ರತಿಯಾಗಿ ಅರಣ್ಯಪಾಲಕರು ಗುಂಡಿನ ದಾಳಿ ನಡೆಸಿದ್ದು ಈ ಸಂದರ್ಭ ನಕ್ಸಲರ ತಂಡ ಕ್ಯಾಂಪಿಂಗ್ ಸಾಮಗ್ರಿಗಳು ಮತ್ತು ಆಹಾರವನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿದೆ ಎನ್ನಲಾಗಿದೆ.
ಘಟನೆಯ ಹಿನ್ನಲೆಯಲ್ಲಿ ಈಗಾಗಲೇ ಸ್ಥಳಕ್ಕೆ ಆಗಮಿಸಿದ ಅರಣ್ಯ,ಪೊಲೀಸ್ ಅಧಿಕಾರಿಗಳು ಜಂಟಿ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ನಕ್ಸಲರ ವಿರುದ್ದ ಕಾರ್ಯಾಚರಣೆ ನಡೆಸುವ ತಂಡರ್ ಬೋಲ್ಟ್ ಕೂಡಾ ಶೋಧ ಕಾರ್ಯಕ್ಕಾಗಿ ಆರಳಂಗೆ ಆಗಮಿಸಿದೆ.
ಗುಂಡು ಹಾರಾಟ ನಡೆದ ಸ್ಥಳ ಸಹಿತ ಸುತ್ತ ಮುತ್ತಲಿನ ಪ್ರದೇಶದಲ್ಲಿ ತೀವ್ರನಿಗಾ ಇರಿಸಲಾಗಿದೆ. ಈ ಪ್ರದೇಶದಲ್ಲಿ ನಕ್ಸಲರು ಬೀಡುಬಿಟ್ಟಿದ್ದಾರೆಂದು ಹಿಂದೆ ವರದಿಯಾಗಿದ್ದರೂ ಇದೇ ಮೊದಲ ಬಾರಿಗೆ ಗುಂಡು ಹಾರಾಟ ನಡೆದಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

Share Information
Advertisement
Click to comment

You must be logged in to post a comment Login

Leave a Reply