LATEST NEWS
ಮಳೆ ಬಂದರೂ ಲೆಕ್ಕಿಸದೇ ರಾಷ್ಟ್ರಗೀತೆಯ ಮಹತ್ವವನ್ನು ಎತ್ತಿ ಹಿಡಿದ ಪುಟಾಣಿಗಳು

ಮಳೆ ಬಂದರೂ ಲೆಕ್ಕಿಸದೇ ರಾಷ್ಟ್ರಗೀತೆಯ ಮಹತ್ವವನ್ನು ಎತ್ತಿ ಹಿಡಿದ ಪುಟಾಣಿಗಳು
ಮಂಗಳೂರು ಅಗಸ್ಟ್ 15: ರಾಷ್ಟ್ರಗೀತೆ ಹಾಡುವಾಗ ಭಾರಿ ಮಳೆ ಸುರಿದರೂ ಲೆಕ್ಕಿಸದೇ ಸಂಪೂರ್ಣ ರಾಷ್ಟ್ರಗೀತೆಯನ್ನು ಹಾಡಿದ ಮಕ್ಕಳ ವಿಡಿಯೋ ಒಂದು ವೈರಲ್ ಆಗಿದ್ದು ಮಕ್ಕಳ ರಾಷ್ಟ್ರಪ್ರೇಮಕ್ಕೆ ಮಚ್ಚುಗೆ ವ್ಯಕ್ತವಾಗಿದೆ.
ಮುಡಿಪು ಸಮೀಪದ ಸಂಬಾರ್ ತೋಟ ಶಾಲೆಯ ವತಿಯಿಂದ ಸ್ವಾತಂತ್ರೋತ್ಸವ ಆಚರಿಸಲಾಯಿತು. ರಾಷ್ಟ್ರದ್ವಜ ಹಾರಿಸಿದ ನಂತರ ಶಾಲೆ ಮಕ್ಕಳು ರಾಷ್ರ್ಟ ಗೀತೆ ಹಾಡುವಾಗ ಭಾರಿ ಮಳೆ ಸುರಿಯಿತು. ಸ್ವಾಂತತ್ರ್ಯೋತ್ಸವಕ್ಕೆ ಅತಿಥಿಗಳಾಗಿ ಬಂದವರು ಮಳೆ ಆರಂಭವಾಗುತ್ತಿದ್ದಂತೆ ಜಾಗ ಬಿಟ್ಟು ಓಟಕ್ಕಿತ್ತಿದ್ದಾರೆ.

ಆದರೆ ಶಾಲೆ ಮಕ್ಕಳು ಮಾತ್ರ ಮಳೆ ಸುರಿದರು ಲೆಕ್ಕಿಸದೆ ರಾಷ್ಟ್ರಗೀತೆ ಮುಂದುವರಿಸಿದರು,ಇವರ ಜೊತೆ ಶಿಕ್ಷಕರು ಸಾಥ್ ನೀಡಿದರು. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಬಾರಿ ವೈರಲ್ ಆಗಿದ್ದು ಮಕ್ಕಳ ಶಿಸ್ತು, ರಾಷ್ಟಪ್ರೇಮಕ್ಕೆ ಪ್ರಶಂಸೆ ವ್ಯಕ್ತವಾಗಿದೆ.