ಉಪ್ಪಿನಂಗಡಿ ಆರ್ ಕೆ ಜ್ಯುವೆಲ್ಲರಿಯಲ್ಲಿ ಕಳ್ಳತನ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು

ಪುತ್ತೂರು ಅಗಸ್ಟ್ 16: ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ನಡೆದಿದ್ದು ಭಾರಿ ಪ್ರಮಾಣದ ಚಿನ್ನ ಲೂಟಿ ಮಾಡಿದ್ದಾರೆ.

ಉಪ್ಪಿನಂಗಡಿಯ ಆರ್.ಕೆ ಜ್ಯುವೆಲ್ಲರಿಯಲ್ಲಿ ಈ ಕಳ್ಳತನ ನಡೆದಿದೆ. ರಾತ್ರಿ ಸುಮಾರು 3 ಗಂಟೆ ವೆಳೆಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಕಳ್ಳರು ಜ್ಯುವೆಲ್ಲರಿಯ ಶಟರ್ ಬೀಗವನ್ನು ಗ್ಯಾಸ್ ಕಟರ್ ಬಳಸಿ ಮುರಿದಿದ್ದಾರೆ. ಬಳಿಕ ಒಳ ನುಗ್ಗಿದ್ದ ಕಳ್ಳರು ಸುಮಾರು 25 ಲಕ್ಷಕ್ಕೂ ಅಧಿಕ ಮೌಲ್ಯದ 400 ಗ್ರಾಂ ಚಿನ್ನಾಭರಣ ಕಳವು ಮಾಡಿದ್ದಾರೆ.

ಜ್ಯುವೆಲ್ಲರಿ ಮಳಿಗೆಯಲ್ಲಿದ್ದ ಸಿಸಿಟಿವಿ ಕ್ಯಾಮರಾ ಸಂಪರ್ಕವನ್ನು ಕಡಿತಗೊಳಿಸಿರುವ ಕಳ್ಳರು , ಸಿಸಿಟಿವಿ ಹಾರ್ಡ್ ಡಿಸ್ಕ ನ್ನು ಹೊತ್ತೊಯ್ದಿದ್ದಾರೆ. ಅಲ್ಲದೆ ಶಟರ್ ಮುರಿಯಲು ಬಳಸಿದ್ದ ವೆಲ್ಡಿಂಗ್ ಸಾಮಾಗ್ರಿಗಳನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.

ಕಳವಾಗಿರುವ ಒಟ್ಟು ಸೊತ್ತುಗಳ ನಿಖರ ಮೌಲ್ಯ ಇನ್ನು ತಿಳಿದು ಬಂದಿಲ್ಲ. ಕಳವು ಮಾಹಿತಿ ಬರುತ್ತಿದ್ದಂತೆ ಪೊಲೀಸರು ಆರೋಪಿಗಳ ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments