ಕುಕ್ಕೆ ಸುಬ್ರಹ್ಣಣ್ಯ ದೇವಸ್ಥಾನದ ಆನೆ ಯಶಸ್ವಿ ಆರೋಗ್ಯದಲ್ಲಿ ಏರುಪೇರು

ಮಂಗಳೂರು ಅಗಸ್ಟ್ 15: ಹೆಸರಾಂತ ನಾಗಕ್ಷೇತ್ರ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದ ಆನೆ ಯಶಸ್ವಿನಿ‌ ಆರೋಗ್ಯದಲ್ಲಿ ಕಳೆದ ಎರಡು‌ ದಿನಗಳಿಂದೀಚೆ ಏರುಪೇರಾಗಿದೆ. ಆನೆ ಯಶಸ್ವಿ ಗೆ ಭೇದಿ ಕಾಣಿಸಿಕೊಂಡಿದ್ದು, ಇಂದು ದುಬಾರೆಯಿಂದ ವೈದ್ಯರ ತಂಡ ಆಗಮಿಸಿ ಚಿಕಿತ್ಸೆ ನೀಡುತ್ತಿದ್ದಾರೆ.

ಎರಡು ದಿನಗಳ ಹಿಂದೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಸಾಕಾನೆ ಇಂದಿರಾ ಜ್ವರದಿಂದ ಮೃತಪಟ್ಟಿರುವ ಹಿನ್ನಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆನೆಯ ಆರೋಗ್ಯದ‌ ಕುರಿತು ದೇವಸ್ಥಾನ ವಿಶೇಷ ಕಾಳಜಿ ವಹಿಸಿದ್ದು, ಪ್ರತಿನಿತ್ಯ ಆನೆಯ ಆರೋಗ್ಯದ ಕಡೆಗೆ ನಿಗಾ ಇಡಲಾಗಿದೆ. ಸುಳ್ಯ ಶಾಸಕ ಎಸ್.ಅಂಗಾರ ಕೂಡಾ ದೇವಸ್ಥಾನಕ್ಕೆ ಭೇಟಿ ನೀಡಿ ಆನೆಯ ಆರೋಗ್ಯದ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದ್ದಾರೆ.

ಹದಿನೈದು ವರ್ಷಗಳ ಹಿಂದೆ ಶಾಸಕ ಆನಂದ್ ಸಿಂಗ್ ಆನೆಯನ್ನು ದೇವಸ್ಥಾನಕ್ಕೆ ನೀಡಿದ್ದು, ಅತ್ಯಂತ ಲವಲವಿಕೆಯಿಂದ ಇದ್ದ ಯಶಸ್ವಿ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಅಚ್ಚುಮೆಚ್ಚಿನ ಆನೆಯಾಗಿಯೂ ಗುರುತಿಸಿಕೊಂಡಿದೆ. ಈ ನಡುವೆ ಆನೆ ಶೀಘ್ರ ಗುಣಮುಖಲಾಗಲೆಂದು ಪ್ರಾರ್ಥಿಸಿ ಭಕ್ತರೊಬ್ಬರು ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಉರುಳು ಸೇವೆಯನ್ನೂ ನಡೆಸಿದ್ದಾರೆ.

Facebook Comments

comments