Connect with us

    LATEST NEWS

    ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

    ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಪ್ಪಿದ ಭಾರೀ ಅನಾಹುತ

    ಮಂಗಳೂರು ಜನವರಿ 11: ವಿಮಾನದ ಟೇಕ್ ಆಫ್ ವೇಳೆ ರನ್ ವೇ ನಲ್ಲಿ ಲಗೇಜ್ ಟ್ರಕ್ ಸಂಚರಿಸಿದ್ದು, ಏರ್ ಟ್ರಾಫಿಕ್ ಕಂಟ್ರೋಲರ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ.

    ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು ಮಂಗಳೂರಿನಿಂದ ಮುಂಬೈಗೆ ಹೊಗಲಿದ್ದ ಜೆಟ್ ಏರ್ ವೆಸ್ ವಿಮಾನ್ ಟೆಕ್ ಆಫ್ ಆಗುವ ಸಂದರ್ಭದಲ್ಲಿ ರನ್ ವೇ ನಲ್ಲಿ ಲಗೇಜ್ ಟ್ರಕ್ ಒಂದು ಕಾಣಿಸಿಕೊಂಡಿದೆ. ಕೂಡಲೇ ಕಾರ್ಯಪ್ರವೃತರಾದ ಏರ್ ಟ್ರಾಫಿಕ್ ಕಂಟ್ರೋಲರ್ ಸಿಬ್ಬಂದಿ ವಿಮಾನಕ್ಕೆ ಸೂಚನೆ ರವಾನಿಸಿದ್ದಾರೆ. ಎಟಿಸಿ ಸೂಚನೆ ಹಿನ್ನೆಲೆಯಲ್ಲಿ ವಿಮಾನ ಟೇಕ್ ಆಫ್ ರದ್ದಾಗಿದೆ. ನಡೆಯಬೇಕಿದ್ದ ಭಾರಿ ಅನಾಹುತ ಎಟಿಸಿ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ತಪ್ಪಿದಂತಾಗಿದೆ.

    ಈ ಘಟನೆಯಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮಂಗಳೂರು – ಮುಂಬೈ ತೆರಳಲಿದ್ದ ಜೆಟ್ ಏರ್ ವೇಸ್ ವಿಮಾನ ಹಾರಾಟ ಕೆಲಕಾಲ ವಿಳಂಬವಾಗಿತ್ತು. ರನ್ ವೇ ಸುಗಮವಾದ ಬಳಿಕ ಮತ್ತೆ ವಿಮಾನ ಟೇಕಾಫ್ ಆಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *