LATEST NEWS
ಕೊಲ್ಲೂರಿನಲ್ಲಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಡಾ. ಕೆ.ಜೆ ಜೇಸುದಾಸ್

ಕೊಲ್ಲೂರಿನಲ್ಲಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಡಾ. ಕೆ.ಜೆ ಜೇಸುದಾಸ್
ಉಡುಪಿ ಜನವರಿ 10: ಗಾನ ಗಂಧರ್ವ ಪದ್ಮಭೂಷಣ ಡಾ. ಕೆ.ಜೆ ಜೇಸುದಾಸ್ ಅವರು ಇಂದು ಕೊಲ್ಲೂರಿನಲ್ಲಿ ಹುಚ್ಚು ಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡರು. ಜೇಸುದಾಸ್ ಹುಟ್ಟುಹಬ್ಬದ ಅಂಗವಾಗಿ ಮೂಕಾಂಬಿಕಾ ಕ್ಷೇತ್ರದಲ್ಲಿ ಸಂಗೀತಾರಾಧನೆ ಕಾರ್ಯಕ್ರಮ ನಡೆಯಿತು.
ಇಂದು ಗಾನ ಗಂಧರ್ವ ಜೇಸುದಾಸ್ ಜನ್ಮದಿನವಾದ ಹಿನ್ನಲೆಯಲ್ಲಿ ಕೊಲ್ಲೂರು ಮುಕಾಂಬಿಕಾ ಕ್ಷೇತ್ರದಲ್ಲಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ಕುಟುಂಬ ಸಮೇತ ಕೊಲ್ಲೂರಿಗೆ ಬಂದಿದ್ದ ಜೇಸುದಾಸ್ ಮೂಕಾಂಬಿಕಾ ದೇವಿಯ ದರ್ಶನ ಪಡೆದರು. ನಂತರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಚಂಡಿಕಾಹೋಮ ನೆರವೆರಿಸಿದರು. ಈ ಸಂದರ್ಭದಲ್ಲಿ ತನ್ನ 78 ನೇ ಹುಟ್ಟು ಹಬ್ಬವನ್ನು ಗರ್ಭಗುಡಿಯ ಸಮ್ಮುಖದಲ್ಲಿ ಕುಳಿತು ಗಾನಸೇವೆ ನಡೆಸುವ ಮೂಲಕ ವಿಶೇಷವಾಗಿ ಆಚರಿಸಿಕೊಂಡರು.
