LATEST NEWS
ಡಿಕೆಶಿ ಪ್ರಭಾವ ಕಡಿಮೆ ಮಾಡಲು ಸಿದ್ದರಾಮಯ್ಯ ಮಾಡಿರೋ ತಂತ್ರಗಾರಿಕೆ ಇರಬಹುದು – ನಳಿನ್ ಕುಮಾರ್ ಕಟೀಲ್
ಮಂಗಳೂರು ಅಕ್ಟೋಬರ್ 13: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಕಾಂಗ್ರೇಸ್ ಮುಖಂಡರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನ ಭ್ರಷ್ಟಾಚಾರ, ಕರ್ಮಕಾಂಡ ಇವತ್ತು ಬಯಲಿಗೆ ಬಂದಿದೆ. ಇವರು ಕಲೆಕ್ಷನ್ ಗಿರಾಕಿಗಳು ಅಂತ ನಾವು ಹೇಳಿಲ್ಲ, ಕಾಂಗ್ರೆಸ್ ನಾಯಕರೇ ಹೇಳಿದ್ದಾರೆ ಇಂದು ಕಾಂಗ್ರೇಸ್ ನ ಭ್ರಷ್ಟಾಚಾರದ ಅನಾವರಣ ಆಗಿದೆ ಎಂದರು.
ಡಿಕೆಶಿ ಹುಡುಗರಲ್ಲೇ ಐನೂರು ಕೋಟಿ ಇದೆ ಅಂತ ಹೇಳಿದ್ದಾರೆ. ಈ ಬಗ್ಗೆ ಅಗತ್ಯವಾಗಿ ಸಿಬಿಐ ಮತ್ತು ಐಟಿ ತನಿಖೆ ಆಗಬೇಕು ಎಂದರು, ಹಿಂದೆ ಡಿಕೆಶಿ ಐಟಿ ರೈಡ್ ವೇಳೆ ಅದು ರಾಜಕೀಯ ಪ್ರೇರಿತ ಅಂದಿದ್ರು, ಆದ್ರೆ ಇವತ್ತು ಯಾವುದೇ ರಾಜಕೀಯ ಪ್ರೇರಿತ ಇಲ್ಲದೇ ಕಾಂಗ್ರೆಸ್ ಕಚೇರಿಯಲ್ಲೇ ಮಾತನಾಡಿದ್ದಾರೆ. ಉಗ್ರಪ್ಪ ಮತ್ತು ಸಲೀಂ ಹೇಳಿರೋದು ಕಾಂಗ್ರೆಸ್ ನ ಭ್ರಷ್ಟಾಚಾರದ ಅನಾವರಣ, ಇದರ ಜೊತೆಗೆ ಇದರ ಹಿಂದೆ ಡಿಕೆಶಿ ಮುಗಿಸೋ ತಂತ್ರಗಾರಿಕೆಯೂ ಇದೆ.
ಡಿಕೆಶಿ ಪ್ರಭಾವ ಕಡಿಮೆ ಮಾಡಲು ಮತ್ತು ಕುಗ್ಗಿಸಲು ಸಿದ್ದರಾಮಯ್ಯ ಮಾಡಿರೋ ತಂತ್ರಗಾರಿಕೆ ಇರಬಹುದು. ಸಿದ್ದರಾಮಯ್ಯ, ಉಗ್ರಪ್ಪ ಹಾಗೂ ಸಲೀಂ ಮೂಲಕ ಈ ಹೇಳಿಕೆ ಮಾಡಿಸಿದ್ದಾರೆ. ಸತ್ಯಾಸತ್ಯತೆ ಬಯಲಾಗಲು ತನಿಖೆ ಆಗಲಿ, ಆಗ ಸಿದ್ದರಾಮಯ್ಯ ಸಿಕ್ಕಿ ಹಾಕಿಕೊಳ್ತಾರೆ. ಇದನ್ನ ಬಿಜೆಪಿ ಹೇಳಿದ್ರೆ ರಾಜಕಾರಣ ಅಂತಾರೆ, ಆದ್ರೆ ಉಗ್ರಪ್ಪ ತಕ್ಕಡಿ ಮೇಲೆಲ್ಲ ಅಂದಿದ್ದಾರೆ. ಕಾಂಗ್ರೆಸ್ ನಾಶದ ಅಂಚಿನಲ್ಲಿದೆ, ಮತ್ತೆ ಮೇಲೆ ಏಳೋದೇ ಇಲ್ಲ .ಮುಂದಿನ ಚುನಾವಣೆ ಮತ್ತು ಉಪಚುನಾವಣೆಯಲ್ಲಿ ಕಾಂಗ್ರೆಸ್ ಠೇವಣೆ ಕಳೆದುಕೊಳ್ಳೋದಕ್ಕೆ ಇದು ಸಾಕ್ಷಿ ಕಾಂಗ್ರೆಸ್ ನ ಈ ಹೇಳಿಕೆಗಳು ಬಿಜೆಪಿ ರಾಜಕೀಯ ಪ್ರೇರಿತವಲ್ಲ ಸಿದ್ದರಾಮಯ್ಯನ ಗುಂಪುಗಾರಿಕೆ ಪ್ರೇರಿತ ಎಂದರು.