Connect with us

    KARNATAKA

    ಕೇರಳದ ಮಗುವಿನ ಚಿಕಿತ್ಸೆಗೆ ಬೆಂಗಳೂರಿಗೆ ಝೀರೋ ಟ್ರಾಫಿಕ್‌ – ಕರ್ನಾಟಕ ಚಾಲಕರ ಒಕ್ಕೂಟದ ಸಾಹಸಕ್ಕೆ ಮೆಚ್ಚುಗೆ

    ಬೆಂಗಳೂರು ಅಕ್ಟೋಬರ್ 13: ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಮಗುವನ್ನು ವಿಶೇಷ ಆಂಬ್ಯುಲೆನ್ಸ್ ಮೂಲಕ ಹೆಚ್ಚಿನ ಚಿಕಿತ್ಸೆಗಾಗಿ ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನಿಸಿದ ವಿದ್ಯಮಾನ ಸಂಭವಿಸಿದೆ.


    ಕೇರಳದ ಕಣ್ಣೂರಿನಿಂದ ಬೆಂಗಳೂರಿಗೆ ಗೋಣಿಕೊಪ್ಪ, ಮೈಸೂರು ಮೂಲಕ ಮಣಿಪಾಲ್ ಆಸ್ಪತ್ರೆಗೆ 9 ತಿಂಗಳ ಮಗುವನ್ನು ವಿಶೇಷ ಮುತುವರ್ಜಿಯಿಂದ ರವಾನಿಸಲಾಗಿದೆ. 9 ತಿಂಗಳ ಇನಾರ ಮರಿಯಂಗೆ ಅಪರೂಪದ‌ ಖಾಯಿಲೆ ಇತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಬೇಕಿತ್ತು. ಕೇರಳದ ಕಣ್ಣೂರಿನಿಂದ ಕೇವಲ 6 ಗಂಟೆಯಲ್ಲಿ ಬೆಂಗಳೂರಿಗೆ ತಲುಪುವ ಅನಿವಾರ್ಯತೆ ಇತ್ತು.


    ಟ್ರಾಫಿಕ್ ಸಮಸ್ಯೆಯ ನಡುವೆ ಮಗುವನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ರೀಚ್ ಮಾಡುವುದು ಅಸಾಧ್ಯದ ಮಾತಾಗಿತ್ತು. ಕರ್ನಾಟಕ ರಾಜ್ಯದಲ್ಲಿನ ಜವಾಬ್ದಾರಿಯನ್ನು ಕರ್ನಾಟಕ ಚಾಲಕರ ಒಕ್ಕೂಟದ ವಹಿಸಿತ್ತು, ಆ್ಯಂಬುಲೆನ್ಸ್ ಚಾಲಕ ಮಾಡಿದ ಮನವಿ ಮೇರೆಗೆ ಕರ್ನಾಟಕ ಚಾಲಕರ ಒಕ್ಕೂಟದ ಎಲ್ಲಾ ಚಾಲಕರಿಗೆ ಸಹಕಾರ ನೀಡಲು ಮನವಿ ಮಾಡಿತ್ತು. ಮನವಿಗೆ ಸ್ಪಂದಿಸಿದ್ದ ಚಾಲಕರು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಆ್ಯಂಬುಲೆನ್ಸ್‌ ನಿರ್ವಿಘ್ನವಾಗಿ ಸಂಚರಿಸಲು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದರು.
    ಜೊತೆಗೆ ಕೇರಳದಿಂದ ಮೈಸೂರು ಮೂಲಕ ಬೆಂಗಳೂರಿಗೆ ಹೊರಟಿದ್ದ ವಿಶೇಷ ಆಂಬ್ಯುಲೆನ್ಸ್ ಹೋಗುವುದಕ್ಕೆ ರಸ್ತೆಯುದ್ದಕ್ಕೂ ಜನ ಕೂಡ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದರು. ಝೀರೋ ಟ್ರಾಫಿಕ್ ವ್ಯವಸ್ಥೆಯಾಗಿದ್ದು ಆಂಬ್ಯುಲೆನ್ಸ್ ತೆರಳಲು ಸಾರ್ವಜನಿಕರ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಇದರಿಂದ 6 ಗಂಟೆಯಲ್ಲಿ ತಲುಪ ಬೇಕಿದ್ದ ಆಂಬ್ಯುಲೆನ್ಸ್ ಕೇವಲ 4 ಗಂಟೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ರೀಚ್ ಆಗಿದೆ.

    ಈಗ ಇನಾರ ಮರಿಯಂ ಸರಿಯಾದ ಸಮಯಕ್ಕೆ ಆಸ್ಪತ್ರೆ ಸೇರಿದ್ದಾಳೆ. ಹೃದಯ ಗಟ್ಟಿ ಮಾಡಿ ಯಮನನ್ನೇ ಎದುರು ಹಾಕಿಕೊಂಡು ಸರಿಯಾದ ಸಮಯಕ್ಕೆ ಮಗುವನ್ನು ಆಸ್ಪತ್ರೆಗೆ ರವಾನಿಸಿದ ಆಂಬ್ಯುಲೆನ್ಸ್ ಚಾಲಕ ಹನೀಫ್ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೇರಳದ ಕಣ್ಣೂರಿನಿಂದ ಝೀರೋ ಟ್ರಾಫಿಕ್ ಮೂಲಕ ಮಗುವನ್ನು ಬೆಂಗಳೂರಿಗೆ ಅಂಬುಲೆನ್ಸ್ ಮುಖಾಂತರ ಹೋಗಲು ಅನುಮಾಡಿ ಕೊಟ್ಟ ಎಲ್ಲಾ ಚಾಲಕರಿಗೆ ಕರ್ನಾಟಕ ಚಾಲಕರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯಂದ್ರ ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply