Connect with us

LATEST NEWS

ರಾತ್ರಿ ಗಸ್ತಿನಲ್ಲಿರುವಾಗ ಮರಕ್ಕೆ ಡಿಕ್ಕಿ ಹೊಡೆದ ಜೀಪ್ ಇಬ್ಬರು ಪೊಲೀಸರ ದುರ್ಮರಣ

ಮೈಸೂರು ನವೆಂಬರ 12: ಬುಧವಾರ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಜೀಪ್ ಅಪಘಾತಕ್ಕೀಡಾಗಿ ಎಎಸ್​ಐ ಮತ್ತು ಹೆಡ್​ ಕಾನ್ಸ್​ಟೇಬಲ್​ ಮೃತಪಟ್ಟಿರುವ ಘಟನೆ ಕೆ.ಆರ್​. ನಗರ ತಾಲೂಕಿನ ಸಿದ್ದನಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಮೃತಪಟ್ಟವರನ್ನು ಎಎಸ್‌ಐ ಮೂರ್ತಿ (58) ಹಾಗೂ ಹೆಡ್ ಕಾನ್ಸ್‌ಟೇಬಲ್ ಶಾಂತಕುಮಾರ್ (45) ಎಂದು ಗುರುತಿಸಲಾಗಿದೆ.

ಇವರು ರಾತ್ರಿ ಗಸ್ತು ಕಾರ್ಯ ನಡೆಸಿ ಚುಂಚನಕಟ್ಟೆ ಕಡೆಯಿಂದ ಕೆ.ಆರ್. ನಗರದ ಕಡೆಗೆ ಬರುತ್ತಿರುವಾಗ ನಸುಕಿನ 3 ಗಂಟೆ ಸಮಯದಲ್ಲಿ ಸಿದ್ದನಕೊಪ್ಪಲು ಗೇಟ್ ಸಮೀಪ ಜೀಪ್ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ
ಮೂರ್ತಿ ಅವರು ಮೂಲತಃ ಚಾಮರಾಜನಗರ ಜಿಲ್ಲೆಯ ನವಿಲೂರು ಗ್ರಾಮದವರು. ಕರ್ತವ್ಯ ಹಿನ್ನೆಲೆಯಲ್ಲಿ ಮೈಸೂರಿನಲ್ಲೇ ವಾಸವಿದ್ದರು. ಶಾಂತಕುಮಾರ್ ಅವರು ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದವರು. ಕೆ ಆರ್ ನಗರ ಪಟ್ಟಣದಲ್ಲಿ ವಾಸವಿದ್ದರು. ಘಟನಾ ಸಂಬಂಧ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments

comments