Connect with us

LATEST NEWS

ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ವಿರುದ್ದ ಪೊಲೀಸ್ ಠಾಣೆಗೆ ಎಸ್ ಡಿಪಿಐ ದೂರು

ಬಂಟ್ವಾಳ: ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಎಸ್ ಡಿಪಿಐ ಪಕ್ಷದ ವಿರುದ್ದ ಹರಿಹಾಯ್ದಿದ್ದ ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ವಿರುದ್ದ ಎಸ್ ಡಿಪಿಐ ದೂರು ದಾಖಲಿಸಿದೆ.


ಹರಿಕೃಷ್ಣ ಬಂಟ್ವಾಳ ಎಸ್ ಡಿಪಿಐ ಪಕ್ಷದ ವಿರುದ್ಧ ಸುಳ್ಳು ಮತ್ತು ನಿರಾಧಾರವಾದ ಗಂಭೀರ ಆರೋಪ ಮಾಡಿದ್ದು, ಹರಿಕೃಷ್ಣ ಬಂಟ್ವಾಳ್ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಬಂಟ್ವಾಳ ನಗರ ಠಾಣೆಗೆ ಎಸ್​​ಡಿಪಿಐ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸದಸ್ಯ ಮುಹಮ್ಮದ್ ಇದ್ರೀಸ್ ದೂರು ನೀಡಿದ್ದಾರೆ.


ಹರಿಕೃಷ್ಣ ಬಂಟ್ವಾಳ್ ಮಾಡಿರುವ ಆರೋಪದಿಂದ ಎಸ್​​ಡಿಪಿಐ ಮೇಲೆ ಗಂಭೀರ ಪರಿಣಾಮ ಬೀರಿದ್ದು, ಪಕ್ಷಕ್ಕೆ ಭಾರೀ ಅವಮಾನ ಉಂಟಾಗಿದೆ. ಪಕ್ಷದ ಬೆಂಬಲಿಗರಿಗೆ ಪಕ್ಷದ ಮೇಲೆ ನಂಬಿಕೆ ಕಡಿಮೆಯಾಗುವಂತಾಗಿದೆ. ಪಕ್ಷದ ಬಗ್ಗೆ ಸಮಾಜದಲ್ಲಿ ನಕರಾತ್ಮಕ ಭಾವನೆ ಉಂಟಾಗುವಂತಾಗಿದೆ ಎಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ. ನಿರಾಧಾರ ಆರೋಪ ಮಾಡಿರುವ ಹರಿಕೃಷ್ಣ ಬಂಟ್ವಾಳ್ ಮತ್ತು ಕಾರ್ಯಕ್ರಮ ಆಯೋಜನೆ ಮಾಡಿದವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಮುಹಮ್ಮದ್ ಇದ್ರೀಸ್ ಒತ್ತಾಯಿಸಿದ್ದಾರೆ.

Facebook Comments

comments