Connect with us

KARNATAKA

ಮೈಸೂರು ಮಹಾರಾಜ ಯದುವೀರ್- ತ್ರಿಷಿಕಾ ದಂಪತಿಗೆ ಎರಡನೇ ಗಂಡು ಮಗು ಜನನ: ಅರಮನೆಯಲ್ಲಿ ಸಂಭ್ರಮ

ಮೈಸೂರು ಅಕ್ಟೋಬರ್ 11: ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾ ಕುಮಾರಿ ದಂಪತಿಗೆ ಎರಡನೇ ಗಂಡು ಮಗು ಜನನವಾಗಿದೆ. ದಸರಾ ಸಂಭ್ರಮದಲ್ಲಿರುವ ಮೈಸೂರು ಅರಮನೆಯಲ್ಲಿ ಸಂತಸ ಇಮ್ಮಡಿಯಾಗಿದೆ.


2016ರಲ್ಲಿ ಮದುವೆಯಾಗಿದ್ದ ದಂಪತಿಗೆ 2017ರ ಡಿಸೆಂಬರ್‌ನಲ್ಲಿ ಆದ್ಯವೀರ್ ನರಸಿಂಹರಾಜ ಒಡೆಯರ್ ಜನಿಸಿದ್ದನು. ಖಾಸಗಿ ದರ್ಬಾರ್ ನಡೆಸಲು ಕಂಕಣಧಾರಿಯಾಗಿರುವ ಯದುವೀರ್ ನವರಾತ್ರಿಯ ಮಹಾನವಮಿ ಪೂಜೆಯಲ್ಲಿ ಪಾಲ್ಗೊಂಡಿದ್ದಾಗ ನಗರದ ಯಾದವಗಿರಿಯ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ತ್ರಿಷಿಕಾ ಅವರಿಗೆ ಗಂಡು ಮಗು ಹುಟ್ಟಿದೆ ಎಂದು ಅರಮನೆ ಮೂಲಗಳು ತಿಳಿಸಿವೆ.

2017ರ ದಸರಾ ಮಹೋತ್ಸವಗಳ ಕಾರ್ಯಕ್ರಮದಲ್ಲಿ ತ್ರಿಶಿಕಾ ಭಾಗವಹಿಸುವಾಗಲೂ ಗರ್ಭಿಣಿಯಾಗಿದ್ದರು. 56 ವರ್ಷಗಳ ಬಳಿಕ ಗರ್ಭಿಣಿ ಮಹಾರಾಣಿ ದಸರಾ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂದು ಅರಮನೆಯವರು ಹರ್ಷ ವ್ಯಕ್ತಪಡಿಸಿದ್ದರು. ಇದೀಗ ಎರಡನೇ ಮಗುವೂ ದಸರಾ ಸಂದರ್ಭದಲ್ಲಿಯೇ ಆಗಿದೆ. ರಾಜಮನೆತನಕ್ಕೆ ಎರಡೆರಡು ಹಬ್ಬಗಳು ಒಂದೇ ಸಲ ಆಗಮಿಸಿವೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *