Connect with us

FILM

ನನ್ನ ದೇಹ ನನ್ನಿಷ್ಟ, ಅದನ್ನು ಕೇಳೋಕೆ ನೀನ್ಯಾರು?

ಮುಂಬೈ: ತನ್ನ ಡ್ರೆಸ್ ಬಗ್ಗೆ ಕಮೆಂಟ್ ಮಾಡಿದ್ದ ನೆಟ್ಟಿಗನಿಗೆ ಬಾಲಿವುಡ್ ಖ್ಯಾತ ಗಾಯಕಿ ಸೋನಾ ಮೋಹಪತ್ರಾ ಅವರು ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.


‘ಐ ನೆವರ್ ಆಸ್ಕ್ ಫಾರ್ ಇಟ್’ ಎಂಬ ಟ್ವಿಟ್ಟರ್ ಅಭಿಯಾನವೊಂದಕ್ಕೆ ಕೈ ಜೋಡಿಸಿರುವ ಸೋನಾ, ತಮ್ಮ ಕಾಲೇಜು ದಿನಗಳಲ್ಲಿ ಚುಡಾಯಿಸುವ ಹಾಗೂ ಲೈಂಗಿಕ ಕಿರುಕುಳ ಎದುರಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಟ್ರೋಲ್ ಮಾಡಿದ ನೆಟ್ಟಿಗನಿಗೆ ಗಾಯಕಿ ಖಾರವಾಗಿ ಪ್ರತಿಕ್ರಿಯಿಸುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.


ನಾನು ಬಿಟೆಕ್ ಎಂಜಿನಿಯರಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಒಂದು ಬಾರಿ ಮೈಕ್ರೊಪ್ರೊಸೆಸ್ಸರ್ ಲ್ಯಾಬ್ ಕಡೆ ಹೋಗುತ್ತಿದ್ದೆ. ಆ ದಿನ ನಾನು ತುಂಬಾನೇ ಸಡಿಲವಾದ ಹಸಿರು ಬಣ್ಣದ ಖಾದಿ ಕುರ್ತಾ ಧರಿಸಿದ್ದೆ. ನನ್ನ ನೋಡಿದ ಸೀನಿಯರ್ ಗಳು ಶಿಳ್ಳೆ ಹೊಡೆದು ನನ್ನ ಒಳಬಟ್ಟೆಯ ಸೈಜ್ ಬಗ್ಗೆ ಜೋರಾಗಿ ಮಾತನಾಡುತ್ತಿದ್ದರು. ಇದೇ ವೇಳೆ ಅಲ್ಲಿಗೆ ಬಂದ ನನ್ನ ಹಿತೈಷಿಯೊಬ್ಬರು, ನಾನು ದೇಹದ ಎಲ್ಲಾ ಭಾಗ ಮುಚ್ಚುವಂತೆ ದುಪ್ಪಟ್ಟ ಧರಿಸಿಲ್ವಾ ಎಂದು ಪ್ರಶ್ನಿಸುವ ಮೂಲಕ ನನ್ನ ಮೇಲೆ ರೇಗಾಡಿ ಹೋದರು ಎಂದು ಸೋನಾ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.


ಈ ವೇಳೆ ಟ್ವಿಟ್ಟರ್ ಬಳಕೆದಾರನೊಬ್ಬ, ನೀವು ಇಷ್ಟೆಲ್ಲಾ ಯೋಚನೆ ಮಾಡುವುದಾದರೆ ಎದೆ ಸೀಳು ಕಾಣುವಂತೆ ಯಾಕೆ ಫೋಟೋಶೂಟ್ ಮಾಡಿಸ್ತೀರಿ?. ನಿಮ್ಮ ಫೋಟೋಗಳಲ್ಲೇ ನೀವು ಎಲ್ಲವನ್ನೂ ಎಕ್ಸ್ ಪೋಸ್ ಮಾಡುತ್ತೀರಿ ಅಂದ ಮೇಲೆ ಯಾಕೆ ನಾಟಕ ಮಾಡೋದು ಎಂದು ಕಿಡಿಕಾರಿದ್ದಾನೆ.

 

https://twitter.com/sonamohapatra/status/1330787156827181057

 

ಇದಕ್ಕೆ ಪ್ರತಿಕ್ರಿಯಿಸಿರುವ ಸೋನಾ, ನನ್ನ ದೇಹ ನನ್ನಿಷ್ಟ ಮಿಸ್ಟರ್ ಜೇ. ಅದನ್ನು ಕೇಳೋಕೆ ನೀನ್ಯಾರು?, ನನಗೇನಿಷ್ಟವೋ ಅದನ್ನೇ ನಾನು ಮಾಡುತ್ತೇನೆ ಎಂದು ಖಡಕ್ಕಾಗಿ ತಿಳಿಸಿದ್ದಾರೆ. ಸೋನಾ ಅವರ ಈ ಪ್ರತಿಕ್ರಿಯೆಗೆ ಕೆಲವರು ಪರವಾದ್ರೆ ಇನ್ನು ಕೆಲವರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *