Connect with us

LATEST NEWS

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು..!!

ಮಂಗಳೂರು ನವೆಂಬರ್ 25 : ಕರಾವಳಿಯಲ್ಲಿ ನಡೆಯುತ್ತಿರುವ ಮರುನಾಮಕರ ರಾಜಕೀಯ ಸದ್ಯಕ್ಕೆ ನಿಲ್ಲುವ ಸೂಚನೆ ಇಲ್ಲ. ಈಗಾಗಲೇ ಮಂಗಳೂರು ವಿಮಾನ ನಿಲ್ದಾಣ , ರೈಲ್ವೆ ನಿಲ್ದಾಣ, ರಸ್ತೆ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತಿದೆ. ಈ ನಡುವೆ ಮಂಗಳೂರು ವಿಮಾನ ನಿಲ್ದಾಣ ಅದಾನಿಗೆ ಹಸ್ತಾಂತರಗೊಂಡ ನಂತರ ಬದಲಾಗಿದ್ದ ಹೆಸರಿನ ವಿರುದ್ದ ಕಾಂಗ್ರೇಸ್ ನ ಹೋರಾಟ ಮುಂದುವರೆದಿದ್ದು, ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ದಕ್ಷಿಣಕನ್ನಡ ಜಿಲ್ಲಾ ಯುವ ಕಾಂಗ್ರೇಸ್ ಅಧ್ಯಕ್ಷ ಮಿಥುನ್ ರೈ ಯಿಂದ ಸುಸ್ವಾಗತ, ಕೋಟಿ-ಚೆನ್ನಯರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂಬ ಕಟೌಟ್ ಅನ್ನು ವಿಮಾನ ನಿಲ್ದಾಣಕ್ಕೆ ಹೋಗುವ ಕೆಂಜಾರು ಸಮೀಪದ ದಾರಿಯಲ್ಲಿ ಅಳವಡಿಸಿದ್ದಾರೆ.


ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೋಟಿ-ಚೆನ್ನಯರ ಹೆಸರು ಹಾಗೂ ಇನ್ನಿತರ ಇತಿಹಾಸ, ರಾಜಕೀಯ ವ್ಯಕ್ತಿಗಳ ಹೆಸರು ಮರು ನಾಮಕರಣ ಮಾಡಬೇಕೆಂಬ ಕೂಗು ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿತ್ತು. ಇದೀಗ ಮಂಗಳೂರು ವಿಮಾನ ನಿಲ್ದಾಣವನ್ನು 50 ವರ್ಷಗಳ ಕಾಲ ನಿರ್ವಹಣೆ ಮಾಡಲು ವಹಿಸಿಕೊಂಡಿರುವ ಅದಾನಿ ಕಂಪನಿ ತನ್ನ ಹೆಸರನ್ನು ಹಾಕಿದ ಬಳಿಕ ಮತ್ತೆ ಕೋಟಿ-ಚೆನ್ನಯರ ಹೆಸರು ನಾಮಕರಣ ಮೇಲ್ಪಂಕ್ತಿಗೆ ಬಂದಿದೆ‌.


ಇದೀಗ ಕೋಟಿ-ಚೆನ್ನಯರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಂಗಳೂರು ಎಂಬ ಬ್ಯಾನರ್ ಅಳವಡಿಕೆಯಾಗಿರುವುದು ಬಹಳಷ್ಟು ಕುತೂಹಲಕ್ಕೆ ಎಡೆ ಮಾಡಿದೆ.  ಈ ಕುರಿತಂತೆ ಟ್ವೀಟ್ ಮಾಡಿರುವ ಮಿಥುನ್ ರೈ ಕೇಂದ್ರ ಸರಕಾರ ಕರಾವಳಿಗರ ಮಾತನ್ನು ಕೇಳುವುದಿಲ್ಲ, ಅಲ್ಲದೆ ತುಳುವರ ಸಂಸ್ಕೃತಿಗೆ ಸರಕಾರ ಗಳು ಬೆಲೆಕೊಡದ ಹಿನ್ನಲೆ ಇನ್ನು ಮುಂದೆ ಮಂಗಳೂರು ವಿಮಾನ ನಿಲ್ದಾಣ ಅದಾನಿ ಎರ್ ಪೋರ್ಟ್ ಅಂತ ಹೇಳಲ್ಲ. ಇದು ಇನ್ನು ಮುಂದೆ ಕೋಟಿ ಚೆನ್ನಯ್ಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆಗಲಿದೆ ಎಂದು ಟ್ವೀಟ್ ಮಾಡಿದ್ದಾರೆ.

Facebook Comments

comments