Connect with us

LATEST NEWS

ದುಡ್ಡಿಗೋಸ್ಕರ ಬೆಳಗಾವಿಯಿಂದ ಕಾರ್ಕಳಕ್ಕೆ ಬರಬೇಕಾಗಿಲ್ಲ – ಪ್ರಮೋದ್ ಮುತಾಲಿಕ್

ಉಡುಪಿ ಫೆಬ್ರವರಿ 15 :ಹಣದ ಆಮಿಷಕ್ಕೆ ಒಳಗಾಗಿ ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಚುನಾವಣೆಗೆ ನಿಂತಿದ್ದಾರೆ ಎಂಬ ಹೇಳಿಕೆಗೆ ಪ್ರಮೋದ್ ಮುತಾಲಿಕ್ ತಿರುಗೇಟು ನೀಡಿದ್ದು, ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳದವರೆಗೆ ಬರಬೇಕಾಗಿಲ್ಲ ಎಂದ ಅವರು ಅದಕ್ಕೆ 45 ವರ್ಷ ಬೇಕಾಗಿಲ್ಲ ಎಂದರು.


ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸುನಿಲ್ ಕುಮಾರ್ ಅವರು ಈಗ ಆತಂಕಕ್ಕೆ ಒಳಗಾಗಿದ್ದಾರೆ. ದುಡ್ಡಿಗೋಸ್ಕರ ನಾನು ಬೆಳಗಾವಿಯಿಂದ ಕಾರ್ಕಳದವರೆಗೆ ಬರಬೇಕಾಗಿಲ್ಲ. ಹಣಕ್ಕೆ ಮನಸ್ಸು ಮಾಡಿದ್ದರೆ ನಾನು ಏನೆನೋ ಆಗ್ತಿದೆ. ನೀವು ಕಾರ್ಕಳಕ್ಕೆ ಬರುವಾಗ ನೀವು ಹೇಗಿದ್ರಿ, ಈಗ ಹೇಗಿದ್ದೀರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ. ಮುತಾಲಿಕ್ ಹಣ ಮಾಡುವವನಲ್ಲ , ನನ್ನ ಮೇಲೆ ಆರೋಪ ಮಾಡಿದ್ದು, ನಿಮಗೆ ಶೋಭೆ ತರುವುದಿಲ್ಲ ಎಂದ ಅವರು ಈ ಸಾರಿ ಅಸಲಿ ಮತ್ತು ನಕಲಿ ಹಿಂದುತ್ವದ ನಡುವೆ ವಾರ್ ಎಂದು ಮುತಾಲಿಕ್ ಎಚ್ಚರಿಸಿದ್ದಾರೆ.


ನನ್ನಲ್ಲಿ ಕಾಸಿಲ್ಲ ವೋಟಿನ ಜೊತೆ ನೂರು ರೂಪಾಯಿ ನೋಟು ಕೊಡಿ ಎಂದು ಬಹಿರಂಗವಾಗಿ ಬೇಡಿಕೆ ಇಟ್ಟಿದ್ದು ಹೌದು ಎಂದ ಅವರು ನನ್ನ ಚುನಾವಣೆ ಪ್ರಚಾರದ ಖರ್ಚಿಗೆ ನಾನು ಮತದಾರರಲ್ಲಿ ನಿಮ್ಮ ಮತ ಜೊತೆ ಹಣ ಕೋಡಿ ಎಂದು ಕೇಳಿದ್ದೇನೆ ಎಂದರು.

 

Advertisement
Click to comment

You must be logged in to post a comment Login

Leave a Reply