LATEST NEWS
ಆರ್ ಎಸ್ ಎಸ್ ಕೇಂದ್ರ ಕಚೇರಿಗೆ ಕಾಶೀ ಮಠಾಧೀಶರ ಭೇಟಿ
ನಾಗಪುರ ಫೆಬ್ರವರಿ 15: ಮಹಾರಾಷ್ಟ್ರದ ನಾಗಪುರದಲ್ಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಧಾನ ಕಚೇರಿಗೆ ಕಾಶೀಮಠಾಧೀಶರಾದ ಪರಮಪೂಜ್ಯ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರು ಬುಧವಾರ ಭೇಟಿ ನೀಡಿದರು.
ಇತ್ತೀಚೆಗೆ ಶ್ರೀಗಳು ಬೆಂಗಳೂರು ಮೊಕ್ಕಾಂನಲ್ಲಿದ್ದಾಗ ಆರ್ ಎಸ್ ಎಸ್ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಬೆಂಗಳೂರಿನ ಕಾಶೀಮಠಕ್ಕೆ ಭೇಟಿ ನೀಡಿ ಶ್ರೀಗಳ ಆರ್ಶೀವಾದ ಪಡೆದು ನಾಗಪುರದಲ್ಲಿರುವ ಸಂಘದ ಕೇಂದ್ರ ಕಚೇರಿಗೆ ಭೇಟಿ ನೀಡಲು ಭಿನ್ನವಿಸಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾಶೀಮಠಾಧೀಶರೊಂದಿಗೆ ಸಂಸ್ಕೃತ ಭಾರತಿಯ ಪ್ರಮುಖರಾದ ದಿನೇಶ್ ಕಾಮತ್, ವಿಶ್ವನಾಥ ಭಟ್, ರಾಧಾಕೃಷ್ಣ ಭಟ್, ಅಮಿತ್ ದಿನೇಶ್ ಪೈ ಮುಂಬೈ, ಮೋಹನದಾಸ್ ಮಲ್ಯ ಹಾಗೂ ಗಣ್ಯರು ಉಪಸ್ಥಿತರಿದ್ದರು.
You must be logged in to post a comment Login