Connect with us

LATEST NEWS

ಅಕ್ಷಯ ತೃತೀಯ ದಿನದಂದು ಹಿಂದೂಗಳ ಅಂಗಡಿಯಿಂದ ಚಿನ್ನ ಖರೀದಿಸಿ – ಮುತಾಲಿಕ್

ಉಡುಪಿ ಎಪ್ರಿಲ್ 25: ಅಕ್ಷಯ ತೃತೀಯ ದಿನದಂದು ಹಿಂದೂ ಆಭರಣಗಳ ಅಂಗಡಿಯಿಂದ ಚಿನ್ನ ಖರೀದಿಸಿ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕದ ಪ್ರಮೋದ್ ಮುತಾಲಿಕ್ ಕರೆ ನೀಡಿದ್ದಾರೆ.


ಕುಂದಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು . ಅಕ್ಷಯ ತೃತೀಯ ಹಿಂದುಗಳ ಹಬ್ಬ. ಹಿಂದುಗಳ ಹಬ್ಬದಂದು ಹಿಂದುಗಳ ಅಂಗಡಿಯಲ್ಲಿ ಖರೀದಿ ಮಾಡಿದರೆ ಸಂಸ್ಕೃತಿ ಉಳಿಯುತ್ತದೆ. ಹಿಂದೂಸ್ತಾನದ ಸುರಕ್ಷತೆಗೆ ಇದು ಅಗತ್ಯ ವಾಗಿದ್ದು, ಹಿಂದೂಗಳು ಅಕ್ಷಯ ತೃತೀಯಾಕ್ಕೆ ಹಿಂದೂಗಳ ಅಂಗಡಿಯಿಂದಲೇ ಚಿನ್ನ ಖರೀದಿಸಬೇಕು. ಈ ಸಂಘರ್ಷ ನಿರಂತರ ಮುಂದುವರೆಯಲಿದೆ.

ಹಲಾಲ್ ಬಗ್ಗೆ ಆಗಿರುವ ಜಾಗೃತಿಯನ್ನು ನಾವು ನೋಡಿದ್ದೇವೆ. ಮುಂದಿನ ದಿನ ಹಲಾಲ್ ಕಟ್ ಮಾಂಸ ಸಂಪೂರ್ಣವಾಗಿ ಹಿಂದೂಗಳು ಖರೀದಿ ಮಾಡುವುದಿಲ್ಲ. ಇದೇ ಮಾದರಿಯ ಹೋರಾಟ ಈ ವಿಚಾರದಲ್ಲೂ ನಡೆಯಲಿದೆ ಎಂದ ಅವರು, ಕೇರಳ ಮೂಲದ ಜ್ಯುವೆಲ್ಲರಿ ಕಂಪನಿಗಳು ಹಿಂಸೆಗೆ ಹಣಕಾಸು ನೆರವು ನೀಡುತ್ತಿವೆ. ಪರೋಕ್ಷವಾಗಿ ದೇಶದ್ರೋಹಿ ಸಂಘಟನೆಗಳಿಗೆ ಸಹಕಾರ ಕೊಡುತ್ತಿದ್ದಾರೆ. ಕೇರಳದಲ್ಲಿ 800ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಈ ರೀತಿ ಬರ್ಬರ ಕೊಲೆಗಳಿಗೆ ಹಣಕಾಸು ನೆರವು ನೀಡಿದ್ದಾರೆ. ಕೇರಳದಲ್ಲಿ ನಡೆದಿರುವುದು ಸ್ವಾರ್ಥದ ಕೊಲೆಯಲ್ಲ, ಸಿದ್ಧಾಂತಕ್ಕಾಗಿ ನಡೆದ ಕೊಲೆ. ಹಿಂದುತ್ವದ ಕಾರಣಕ್ಕೆ ಕೊಲೆ ಮಾಡಿದ್ದಾರೆ. ಚಿನ್ನದ ವ್ಯಾಪಾರಸ್ಥರು ಇದಕ್ಕೆ ಹಣ ಹೂಡಿದ್ದಾರೆ ಎಂದರು.

ಇವರ ಜಾಹೀರಾತುಗಳಲ್ಲಿ ಮುಸ್ಲಿಂ ಮಹಿಳೆಯರನ್ನೇ ತೋರಿಸುತ್ತಾರೆ. ಹಣೆಯಲ್ಲಿ ಕುಂಕುಮ ಇಲ್ಲದವರನ್ನು ತೋರಿಸುತ್ತಾರೆ. ಹಣೆ ಮೇಲೆ ಕುಂಕುಮ ಇಟ್ಟವರನ್ನು, ಹಿಂದೂ ಸ್ತ್ರೀಯರನ್ನು ತೋರಿಸುವುದಿಲ್ಲ. ನಮ್ಮ ಸಂಸ್ಕೃತಿಯ ಅವಹೇಳನ ಮಾಡುತ್ತಿದ್ದಾರೆ. ನಮ್ಮ ಹಣಬೇಕು, ಸಂಸ್ಕೃತಿ ಬೇಡ ಎನ್ನುತ್ತಾರೆ ಎಂದವರು ಆಪಾದಿಸಿದರು.

Advertisement
Click to comment

You must be logged in to post a comment Login

Leave a Reply