Connect with us

LATEST NEWS

ಕೊರಗಜ್ಜನಿಗೆ ದೇವಾಲಯ ಕಟ್ಟಿಸಿ 19 ವರ್ಷದಿಂದ ದಿನನಿತ್ಯ ಪೂಜೆ ಸಲ್ಲಿಸುತ್ತಿರುವ ಮುಸ್ಲಿಂ ವ್ಯಕ್ತಿ..!

ಮುಲ್ಕಿ : ಮಂಗಳೂರಿನಲ್ಲಿ ಒಂದು ಕಡೆ ದೈವಗಳ ಗುಡಿಗಳಲ್ಲಿ ಅಪಚಾರ ಮಾಡುವ ಕೆಲಸ ದುಷ್ಕರ್ಮಿಗಳಿಂದ ನಡೆಯುತ್ತಿದ್ದರೆ ಇನ್ನೊಂದೆಡೆ ಕೋಮುಸೌಹಾರ್ದತೆಯನ್ನು ಸಾರುವ ಕೆಲಸವನ್ನು ಮುಸ್ಲಿಂ ವ್ಯಕ್ತಿಯೊಬ್ಬರು ಮಾಡುತ್ತಿದ್ದಾರೆ. ಹೌದು ಮೂಲ್ಕಿಯ ಬಳ್ಕುಂಜೆ ಗ್ರಾಮದ ಕವತ್ತಾರು ಎಂಬಲ್ಲಿ ಇರುವ 65ರ ಹರೆಯದ ಕಾಸಿಂ ಸಾಹೇಬ್‌ ಎಂಬವರು ಕೊರಗಜ್ಜ ಹಾಗೂ ಪರಿವಾರ ದೈವರನ್ನು ಸದ್ದಿಲ್ಲದೆ ಪಾತ್ರಿಯಾಗಿ ಕಳೆದ 19 ವರ್ಷಗಳಿಂದ ಪೂಜಿಸಿಕೊಂಡು ಬರುತ್ತಿದ್ದಾರೆ.

ಕಾಸಿಂ ಸಾಹೇಬ್‌ ಮೂಲತಃ ಕೇರಳದ ಪಾಲಕ್ಕಾಡ್‌ ಜಿಲ್ಲೆಯವರು. ತಮ್ಮ 30ನೇ ವರ್ಷದಲ್ಲಿ ಗರಗಸ ಹಿಡಿದು ಮರಗಳನ್ನು ಸೀಳುವ ಕೆಲಸಕ್ಕೆಂದು ಕರ್ನಾಟಕದ ಸುಳ್ಯ, ಬಳ್ಕುಂಜೆ ಬಳಿಕ ಕುಟುಂಬ ಸಹಿತ ಕವತ್ತಾರಿಗೆ ಬಂದು ನೆಲೆ ನಿಂತವರು. 35 ವರ್ಷ ಹಿಂದೆ ಸರಕಾರಿ ಜಾಗದಲ್ಲಿ ಜೋಪಡಿ ಕಟ್ಟಿಕೊಂಡು ಪತ್ನಿ ಹಾಗೂ ಐವರು ಮಕ್ಕಳ ಜತೆ ಸಂಸಾರ ಆರಂಭಿಸಿದ್ದರು.

ಆದರ ಅವರ ಜೀವನ ಅಷ್ಟೇನು ಸುಖಕರವಾಗಿರಲಿಲ್ಲ. ಇಂತಹ ಸಂದರ್ಭದಲ್ಲಿ ಖಾಸಿಮ್ ಕಾಲಿಗೆ ಗಾಯವಾಗಿ ತೊಂದರೆಗೊಳಗಾಗುತ್ತಾರೆ. ಆಗ ಖಾಸಿಮ್ ಗ್ರಾಮದ ಪಾತ್ರಿ ಒಬ್ಬರನ್ನು ಭೇಟಿಯಾಗುತ್ತಾರೆ. ಪಾತ್ರಿಯ ಹತ್ತಿರ ತಮ್ಮ ಸಮಸ್ಯೆ ಹೇಳಿಕೊಂಡಾಗ ಪಾತ್ರಿ ಕೊರಗಜ್ಜನಿಗೆ ದೇವಾಲಯ ಕಟ್ಟುವಂತೆ ಸಲಹೆ ಕೊಡುತ್ತಾರೆ. ಹಾಗಾಗಿ ಪಾತ್ರಿಯ ಸಲಹೆಯಂತೆ ಖಾಸಿಮ್ ಚಿಕ್ಕ ಜಾಗದಲ್ಲಿ ದೇವಾಲಯವನ್ನು ಕಟ್ಟುತ್ತಾರೆ.

ಹಿಂದೆ ಮರೆಯಲ್ಲಿದ್ದ ದೈವಗಳಿಗೆ ಗುಡಿಗಳನ್ನು ನಿರ್ಮಿಸಿ ಪ್ರತಿದಿನ ಪೂಜೆ ಮಾಡುತ್ತಿದ್ದೇನೆ. ಸಮಸ್ಯೆ ಹೇಳಿಕೊಂಡು ಬರುವವರಿಗೆ ಕೊರಗಜ್ಜನ ಮಾರ್ಗದರ್ಶನದಂತೆ ಕರಿಗಂಧ ನೀಡುತ್ತಿದ್ದೇನೆ. ಬಪ್ಪನಾಡು ಕ್ಷೇತ್ರದ ಉಳ್ಳಾಲ್ತಿ, ಕೊರತಿ, ಗುಳಿಗ ಹಾಗೂ ಕೊರಗಜ್ಜನನ್ನು ಆರಾಧಿಸಲಾಗುತ್ತಿದೆ. ನಿತ್ಯ ದೀಪ ಸೇವೆ, ಸಂಕ್ರಾಂತಿಯಂದು ಸಲ್ಲಿಸುವ ಪೂಜೆ, 2-3 ವರ್ಷಗಳಿಗೊಮ್ಮೆ ಅನುಕೂಲಕ್ಕೆ ತಕ್ಕ ಹಾಗೆ ಕೋಲ, ಹರಕೆ ರೂಪದ ಪೂಜೆ ಸಲ್ಲಿಸಲಾಗುತ್ತದೆ. ಯಾವುದೇ ಧರ್ಮ ಭೇದವಿಲ್ಲದೆ ಭಕ್ತರು ಆಗಮಿಸಿ ಹರಕೆ ಸಲ್ಲಿಸುತ್ತಾರೆ ಎಂದು ಕಾಸಿಂ ತಿಳಿಸಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *