Connect with us

    BELTHANGADI

    ಹೆಬ್ಬಾವನ್ನೇ ನುಂಗಿದ ಕಾಳಿಂಗ ಸರ್ಪ.. ವಿಡಿಯೋ ವೈರಲ್

    ಬೆಳ್ತಂಗಡಿ ಎಪ್ರಿಲ್ 3: ಸಾಮಾನ್ಯವಾಗಿ ಹೆಬ್ಬಾವು ಯಾವುದೇ ಪ್ರಾಣಿಯನ್ನು ಲೀಲಾಜಾಲವಾಗಿ ನುಂಗಿ ನೀರು ಕುಡಿಯಬಲ್ಲದು, ಆದರೆ ಇಲ್ಲಿ ಮಾತ್ರ ಕಥೆಯೇ ಬೇರೆ ನಡೆದಿದ್ದು, ಕಾಳಿಂಗ ಸರ್ಪವೊಂದು ಹೆಬ್ಬಾವನ್ನೇ ನುಂಗಿದ್ದು, ಘಟನೆ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಹೌದು ಈ ಘಟನೆ ನಡೆದಿದ್ದು ಬೆಳ್ತಂಗಡಿ ತಾಲೂಕಿನ ಸೋಮಂತಡ್ಕ ಎಂಬಲ್ಲಿ, ಹೆಬ್ಬಾವು ಯಾವುದೇ ದೊಡ್ಡ ಪ್ರಾಣಿಗಳನ್ನು ಸಹ ತನ್ನ ಬಲಿಷ್ಠ ದೇಹದಿಂದ ಸುತ್ತುವರಿದು, ಉಸಿರುಗಟ್ಟಿ ಸಾಯಿಸಿ ಲೀಲಾಜಾಲವಾಗಿ ನುಂಗಿ ತನ್ನ ಹಸಿವನ್ನ ನೀಗಿಸಿಕೊಳ್ಳುತ್ತದೆ. ಆದರೆ ಇಲ್ಲಿ ಹೆಬ್ಬಾವನ್ನೇ ಕಾಳಿಂಗ ಸರ್ಪ ನುಂಗಿತೆಂದರೆ ಯಾರಿಗೆ ತಾನೇ ಅಚ್ಚರಿಯಾಗುವುದಿಲ್ಲ. ಸೋಮಂತಡ್ಕದ ಮನೆಯೊಂದರ ಹಿತ್ತಲಿನಲ್ಲಿ ಈ ಘಟನೆ ನಡೆದಿದೆ. ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ, ಹೆಬ್ಬಾವವನ್ನು ನುಂಗಿ ಎರಡು ದಿನದಿಂದ ಒಂದು ಸ್ವಲ್ಪವೂ ಕದಲದ ಇದ್ದಲ್ಲಿಯೇ ಇತ್ತು.


    ಮನೆಯವರಿಂದ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗತಜ್ಞ ಬೆಳ್ತಂಗಡಿಯ ಸ್ನೇಕ್ ಅಶೋಕ್​ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಿ, ಕಾಡಿಗೆ ರವಾನಿಸಿದರು. ಆದರೆ, ಘಟನೆಯಲ್ಲಿ ಹೆಬ್ಬಾವು ಮೃತಪಟ್ಟಿತು. ಹೆಬ್ಬಾವನ್ನು ನುಂಗಿದ ಕಾಳಿಂಗ ಸರ್ಪ ಮತ್ತೆ ವಾಪಸ್ಸು ಹೊರ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply