Connect with us

    LATEST NEWS

    11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡಿದ ತಮಿಳಿನ ಖ್ಯಾತ ಮ್ಯೂಸಿಕ್ ಡೈರೆಕ್ಟರ್

    ಚೆನ್ನೈ ಮೇ 14: ತಮಿಳು ಚಿತ್ರರಂಗದಲ್ಲಿ ಇತ್ತೀಚೆಗೆ ಡೈವೋರ್ಸ್ ಸುದ್ದಿಯಾಗುತ್ತಿದ್ದ, ಪ್ರಸಿದ್ದ ಚಿತ್ರತಾರೆಯರು ವಿವಾಹ ವಿಚ್ಚೇದನ ಪಡೆಯುತ್ತಿದ್ದಾರೆ. ಇದಕ್ಕೆ ಇದೀಗ ತಮಿಳಿನ ಖ್ಯಾತ ಸಂಗೀತ ನಿರ್ದೇಶಕ ಜಿ.ವಿ ಪ್ರಕಾಶ್ ಕುಮಾರ್ ಸೇರ್ಪಡೆಯಾಗಿದ್ದು, ಇವರು ತಮ್ಮ 11 ವರ್ಷಗಳ ದಾಂಪತ್ಯ ಬದುಕಿಗೆ ಅಂತ್ಯ ಹಾಡಿದ್ದಾರೆ.


    ಸಾಕಷ್ಟು ಆಲೋಚಿಸಿ ನಾನು ಹಾಗೂ ಸೈಂಧವಿ ಬೇರೆ ಆಗುತ್ತಿದ್ದೇವೆ. 11 ವರ್ಷಗಳ ದಾಂಪತ್ಯಕ್ಕೆ ಕೊನೆ ಹಾಡುತ್ತಿದ್ದೇವೆ. ನಮ್ಮ ಮಾನಸಿಕ ಆರೋಗ್ಯಕ್ಕಾಗಿ ಈ ನಿರ್ಧಾರ ಎಂದು ಪ್ರಕಾಶ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಾಂಪತ್ಯ ಬದುಕಿನ ಬಿರುಕಿನ ಬಗ್ಗೆ ಹಲವು ದಿನಗಳಿಂದ ಸುದ್ದಿಯಾಗಿತ್ತು. ಈಗ ಅಧಿಕೃತ ಮಾಹಿತಿ ಹೊರಬಿದ್ದಿದೆ.

    ಈ ವೈಯಕ್ತಿಕ ಪರಿವರ್ತನೆಯ ಸಮಯದಲ್ಲಿ ನಮ್ಮ ಖಾಸಗಿತನಕ್ಕೆ ಬೆಲೆ ನೀಡಬೇಕು ಎಂದು ಮಾಧ್ಯಮಗಳು, ಸ್ನೇಹಿತರು ಮತ್ತು ಅಭಿಮಾನಿಗಳನ್ನು ನಾವು ದಯೆಯಿಂದ ಕೇಳುತ್ತೇವೆ. ನಾವು ಬೇರೆ ಬೇರೆ ಆಗಿ ಬೆಳೆಯುತ್ತಿದ್ದೇವೆ. ಇದು ಅತ್ಯುತ್ತಮ ನಿರ್ಧಾರ ಎಂದು ನಾವು ಭಾವಿಸುತ್ತೇವೆ. ಈ ಕಷ್ಟದ ಸಮಯದಲ್ಲಿ ನಿಮ್ಮ ತಿಳುವಳಿಕೆ ಮತ್ತು ಬೆಂಬಲವು ಮುಖ್ಯ ಎಂದು ಪ್ರಕಾಶ್ ಬರೆದುಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply