Connect with us

  LATEST NEWS

  ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗದ ಕಾಟ – ವಾಹನ ಸವಾರರಿಗೆ ಪರದಾಟ

  ಚಿಕ್ಕಮಗಳೂರು ಮೇ 14: ಚಾರ್ಮಾಡಿ ಘಾಟ್ ನಲ್ಲಿ ಒಂಟಿ ಸಲಗದ ಕಾಟಕ್ಕೆ ವಾಹನ ಸವಾರರು ಪರದಾಡುವಂತ ಸ್ಥಿತಿಗೆ ತಲುಪಿದ್ದಾರೆ.


  ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸೋ ಚಾರ್ಮಾಡಿ ಘಾಟ್ ನಲ್ಲಿ ಕಳೆದ ಎರಡು ಮೂರುದಿನಗಳಿಂದ ಒಂಟಿ ಸಲಗದ ಕಾಟ ಜೋರಾಗಿದೆ. ರಾತ್ರಿ ವೇಳೆಯಲ್ಲಿ ಚಾರ್ಮಾಡಿ ಘಾಟ್ ನಲ್ಲಿ ಕಾಣಸಿಗುವ ಒಂಟಿಸಲಗದಿಂದಾಗಿ ಆನೆಯ ಚಲನವಲನ ನೋಡಿ ವಾಹನಗಳು ಮುಂದೆ ಸಾಗುವಂತಾಗಿದೆ. ಚಾರ್ಮಾಡಿ ಘಾಟ್ ನ ತಿರುವಿನಲ್ಲಿ ರಾತ್ರಿ ವೇಳೆ ಕಾಣ ಸಿಗುವ ಒಂಟಿ ಸಲಗದಿಂಗ ಭಯದಿಂದಲೇ ಕಾಡಾನೆ ದಾಟಿ ವಾಹನಗಳು ಸಾಗುತ್ತಿವೆ. ದೊಡ್ಡ-ದೊಡ್ಡ ವಾಹನಗಳಂತೂ ಮುಂದೆ ಸಾಗಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಎರಡು ದಿನದಿಂದ ನಿರಂತರವಾಗಿ ರಸ್ತೆಯಲ್ಲಿ ಕಾಣಿಸಿಕೊಳ್ತಾ ಇರೋ ಕಾಡಾನೆಯನ್ನು ಸ್ಥಳಾಂತರಿಸಲು ಆಗ್ರಹಿಸಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply