Connect with us

LATEST NEWS

ಮುಂಬೈಯ ‘ಕಾಲಿ ಪೀಲಿ’ ‘ಪ್ರೀಮಿಯರ್‌ ಪದ್ಮಿನಿ’ ಗೆ ಭಾವಪೂರ್ಣ ವಿದಾಯ..!

ಮುಂಬೈ : ದೇಶದ ‘ವಾಣಿಜ್ಯನಗರಿ’ ಮುಂಬೈಯಲ್ಲಿ 6 ದಶಕಗಳ ಕಾಲ ಮಹಾರಾಣಿಯಂತೆ ಮೆರೆದ್ರೂ ಜನಸಾಮಾನ್ಯರ ಸೇವೆಯಲ್ಲಿ ಸದಾ ನಿರತವಾಗಿದ್ದ ‘ಕಪ್ಪು- ಹಳದಿ ಬಣ್ಣದ ಪ್ರೀಮಿಯರ್‌ ಪದ್ಮಿನಿ'(premier padmini)  ಟ್ಯಾಕ್ಸಿಗಳು ಮಹಾನಗರದ ರಸ್ತೆಯಿಂದ ಕಣ್ಮರೆಯಾಗಿವೆ.

‘ಕಾಲಿ- ಪೀಲಿ ಟ್ಯಾಕ್ಸಿ’ ಅಂದರೆ ಕಪ್ಪು – ಹಳದಿ ಎಂದೇ ಜನಜನಿತವಾಗಿದ್ದ ಈ ಟ್ಯಾಕ್ಸಿ(TAXI)ಗಳು ಮುಂಬಯಿ ನಿವಾಸಿಗಳ ಜೀವನದ ಅವಿಭಾಜ್ಯ ಅಂಗವಾಗಿದ್ದುವು. ಆದ್ರೆ ಇನ್ನು ಬರೀ ನೆನಪು ಮಾತ್ರ. ಮುಂಬಯಿ ಮಹಾನಗರದಲ್ಲಿ ಲೋಕಲ್‌ ಟ್ಯಾಕ್ಸಿಗಳ ಗರಿಷ್ಠ ವಯೋಮಿತಿ 20 ವರ್ಷ ಎಂದು RTO ನಿಗದಿಪಡಿಸಿದೆ. ಹಾಗಾಗಿ, ಹಳೆಯ ಮಾಡೆಲ್‌ ಪ್ರೀಮಿಯರ್‌ ಪದ್ಮಿನಿ ಕಾರುಗಳು ಇನ್ಮುಂದೆ ರಸ್ತೆಗಿಳಿಯುವಂತಿಲ್ಲ. 2003ರ ಅ. 29ರಂದು ಮುಂಬಯಿ ಸಾರಿಗೆ ಕಚೇರಿಯಲ್ಲಿ ನಗರದ ಕೊನೆಯ ಪ್ರೀಮಿಯರ್‌ ಪದ್ಮಿನಿ ಟ್ಯಾಕ್ಸಿ ನೋಂದಣಿಯಾಗಿದೆ.

ಅದರ ವಾಯಿದೆ ಇದೇ 2023ರ ಅ.30ಕ್ಕೆ ಕೊನೆಗೊಂಡಿದೆ.ಅದರ ಮಾಲೀಕರು ಪ್ರಭಾದೇವಿ ಪ್ರದೇಶದ ನಿವಾಸಿ ಅಬ್ದುಲ್‌ ಕರೀಂ ಕರ್ಸೇಕರ್‌. ವಾಹನದ ನೋಂದಣಿ ಸಂಖ್ಯೆ ‘MH – 01 JA – 2556’ ಆಗಿದೆ. ಅವರು ಕೂಡ ಭಾವುಕವಾಗಿ ತಮ್ಮ ನೆಚ್ಚಿನ ಸಾರಿಗೆ ಸಂಗಾತಿಗೆ ವಿದಾಯ ಕೋರಿದ್ದಾರೆ. ಈ ಪ್ರಿಮಿಯರ್ ಪದ್ಮಿನಿ ಟ್ಯಾಕ್ಸಿ ಮುಂಬಯಿನ ಘನತೆಯಂತಿತ್ತು. ನಮ್ಮ ಜೀವ ಕೂಡ, ಜನರ ಜೀವನಾಡಿ ಕೂಡ ಆಗಿತ್ತು ಎಂದು ಟ್ಯಾಕ್ಸಿ ಮಾಲೀಕ ಅಬ್ದುಲ್‌ ಕರೀಂ ಕರ್ಸೇಕರ್‌ ಪ್ರತಿಕ್ರೀಯಿಸಿದ್ದಾರೆ.

1964 ರಲ್ಲಿ ಫಿಯೆಟ್(Fiat)  ಹೆಸರಿನಲ್ಲಿ ಮುಂಬೈಯ ರಸ್ತೆಗಿಳಿದ ಈ ಕಾರು ಬಳಿಕ ಪ್ರಿಮಿಯರ್ ಪದ್ಮಿನಿ ಹೆಸರಿನಲ್ಲಿ ಜನಪ್ರಿಯಗೊಂಡಿತ್ತು. ಮುಂಬಯಿನ ಸಾರಿಗೆ ವ್ಯವಸ್ಥೆಯ ವಿಶೇಷತೆಗಳಲ್ಲಿ ಅಗ್ರಸ್ಥಾನ ಗಳಿಸಿದ್ದ ಕೆಂಪು ಬಣ್ಣದ ‘ಡಬಲ್‌ ಡೆಕ್ಕರ್‌ ಬೆಸ್ಟ್‌ ಬಸ್‌’ ಕೂಡ ಇತ್ತೀಚೆಗೆ ರಸ್ತೆಯಿಂದ ದೂರವಾಗಿತ್ತು. ಇದೀಗ ಇದರ ಬೆನ್ನಿಗೇ ಮುಂಬೈ ನಿವಾಸಿಗಳ ಜೀವನಾಡಿಯಾಗಿದ್ದ ‘ಕಾಲಿ ಪೀಲಿ ಟ್ಯಾಕ್ಸಿ’ ಕೂಡ ನಿಲುಗಡೆಗೊಂಡಿದೆ.ಮುಂಬಯಿ ಮಹಾನಗರದ ಟ್ಯಾಕ್ಸಿ ಚಾಲಕರು, “ಸರಕಾರ ಹಾಗೂ ಪಾಲಿಕೆಯು ಆಯ್ದ ಕಾಲಿ ಪೀಲಿ ಟ್ಯಾಕ್ಸಿಗಳನ್ನು ವಸ್ತು ಸಂಗ್ರಹಾಲಯಗಳಲ್ಲಿ ಸಂರಕ್ಷಿಸಿಡಬೇಕು,” ಎಂದು ಮನವಿ ಮಾಡಿದ್ದಾರೆ.

Share Information
Advertisement
Click to comment

You must be logged in to post a comment Login

Leave a Reply