Connect with us

LATEST NEWS

Mumbai : ಇತಿಹಾಸದ ಪುಟ ಸೇರಿದ ಡಬ್ಬಲ್ ಡೆಕ್ಕರ್ ಬಸ್‌- 8 ದಶಕಗಳ ಜರ್ನಿಗೆ ಜನರ ಭಾವುಕ ವಿದಾಯ..!

Share Information

ಒಂದು ಕಾಲದಲ್ಲಿ ಮುಂಬೈ ಮಹಾ ನಗರವನ್ನೇ ಆಳಿದ ಹಲವಾರು ಮಾಸದ ನೆನಪುಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಮುಂಬೈಯ ಡಬ್ಬಲ್ ಡೆಕ್ಕರ್ ಬಸ್ ಇತಿಹಾಸದ ಪುಟ ಸೇರಿತು. ಶುಕ್ರವಾರ ದಿನ ತನ್ನ ಕೊನೆಯ ಪ್ರಯಾಣ ನಡೆಸಿತು.

ಮುಂಬೈ : ಒಂದು ಕಾಲದಲ್ಲಿ ಮುಂಬೈ ಮಹಾ ನಗರವನ್ನೇ ಆಳಿದ ಹಲವಾರು ಮಾಸದ ನೆನಪುಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿರುವ ಮುಂಬೈಯ ಡಬ್ಬಲ್ ಡೆಕ್ಕರ್ ಬಸ್ ಇತಿಹಾಸದ ಪುಟ ಸೇರಿತು.

 

ಶುಕ್ರವಾರ ದಿನ ತನ್ನ ಕೊನೆಯ ಪ್ರಯಾಣ ನಡೆಸಿತು. ಈ ಮುಂಬೈ ರಾಣಿ. ಸಾಮಾಜಿಕ ಜಾಲ ತಾಣಗಳಲ್ಲಿ ಮುಂಬೈ ಜನ ರಾಣಿಗೆ ಭಾವಪೂರ್ಣ ವಿದಾಯ ಹೇಳುತ್ತಿದ್ದಾರೆ.

ಬೃಹತ್‌ ಮುಂಬೈಯ ಎಲೆಕ್ಟ್ರಿಕ್‌ ಸಪ್ಲೈ & ಟ್ರಾನ್ಸ್‌ಪೋರ್ಟ್ ಸಂಸ್ಥೆ ನಗರದಲ್ಲಿ ಕೊನೆಯದಾಗಿ ಓಡಾಡುತ್ತಿದ್ದ ಡಬ್ಬಲ್ ಡೆಕ್ಕರ್ ಬಸ್‌ನ್ನು ತನ್ನ ಸುಪರ್ದಿಗೆ ಪಡೆಕೊಂಡಿತು.

ಹೊಸ ಎಲೆಕ್ಟ್ರಿಕ್ ಡಬ್ಬಲ್ ಡೆಕ್ಕರ್

ಈ ಬಿಇಎಸ್‌ಟಿ ಮುಂದಿನ ಒಂಬತ್ತು ತಿಂಗಳಲ್ಲಿ ಈ ಡಬ್ಬಲ್ ಡೆಕ್ಕರ್ ಬಸ್‌ಗೆ ಬದಲಾಗಿ 900 ಹವಾನಿಯಂತ್ರಿತ ಬ್ಯಾಟರಿ ಚಾಲಿತ ಡಬ್ಬಲ್ ಡೆಕ್ಕರ್ ಬಸ್‌ಗಳನ್ನು ನಗರದ ಸಂಚಾರ ವ್ಯವಸ್ಥೆಗೆ ಹಸ್ತಾಂತರ ಮಾಡಲಿದೆ.

ಕೆಂಪು ಬಣ್ಣದ ಈ ಡಬ್ಬಲ್ ಡೆಕ್ಕರ್ ಬಸ್ ಮುಂಬೈ ಪ್ರವಾಸೋದ್ಯಮಕ್ಕೆ ಹಲವು ವರ್ಷಗಳಿಂದ ತನ್ನದೇ ಕೊಡುಗೆ ನೀಡಿದೆ.

ಮುಂಬೈ ಪ್ರವಾಸ ಬಂದವರೆಲ್ಲಾ ಒಮ್ಮೆಯಾದರು ಈ ಬಸ್ ಹತ್ತಿ ಖುಷಿ ಪಡುತ್ತಿದ್ದರು. ಬರೀ ಇಷ್ಟೇ ಅಲ್ಲದೇ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿಯೂ ಹಳೆಯ ಹಿಂದಿ ಹಾಡುಗಳಲ್ಲಿ ಈ ಬಸ್‌ನ ದೃಶ್ಯವಿದೆ.

ಶಾನ್, ಜಾನೇ ಬಿ ದೋ, ಅರ್ಜುನ್, ಜಾನೇ ಬಿ ದೋ, ನಾಯಕ್ ರಿಯಲ್ ಹೀರೋ, ತಾರೆ ಜಮೀನ್ ಪರ್, ಮುಂತಾದ ಸಿನಿಮಾಗಳಲ್ಲಿ ಈ ಡಬ್ಬಲ್ ಡೆಕ್ಕರ್ ಬಸ್‌ನ ಚಿತ್ರಣವಿದೆ.

ಬೆಳೆಯುತ್ತಿರುವ ಮುಂಬೈ ನಗರದಲ್ಲಿ BEST ತನ್ನ ಬಸ್ ಸೇವೆಯನ್ನು ಪ್ರಾರಂಭಿಸಿದ ಒಂದು ದಶಕದ ನಂತರ ಅಂದ್ರೆ 1937 ರಲ್ಲಿ ಮುಂಬೈ ರಸ್ತೆಗಳಲ್ಲಿ ಮೊದಲ ಡಬಲ್ ಡೆಕ್ಕರ್ ಬಸ್ ಅನ್ನು ಪರಿಚಯಿಸಲಾಯಿತು.

1990 ರ ದಶಕದ ಮಧ್ಯಭಾಗದವರೆಗೆ, BEST ತನ್ನ ಫ್ಲೀಟ್‌ನಲ್ಲಿ ಸುಮಾರು 900 ಡಬಲ್ ಡೆಕ್ಕರ್ ಬಸ್‌ಗಳನ್ನು ಹೊಂದಿತ್ತು.

ಬಳಿಕ ಆಧುನಿಕ ಕಾಲದ ಭರಾಟೆಯಲ್ಲಿ ಈ ಸಂಖ್ಯೆ ಕಡಿಮೆಯಾಗಲು ಪ್ರಾರಂಭಿಸಿತು ಬಳಿಕ 2010 ರಲ್ಲಿ ಜನತೆಯ ಒತ್ತಾಸೆ ಮೇರೆಗೆ ಮತ್ತೆ ಸುಮಾರು 125 ಬಸ್‌ಗಳನ್ನು ರಸ್ತೆಗೆ ಬಿಡಲಾಯಿತು.

ಆದ್ರೆ 2019 ರ ಹೊತ್ತಿಗೆ ಅದು 50 ಕ್ಕೆ ಇಳಿಯಿತು.ಕಾಲ ಕ್ರಮೇಣ ಪರಿಸರ ಮಾಲಿನ್ಯದ ಕಾರಣ ಅತೀ ಹೆಚ್ಚು ಹೊಗೆ ಉಗುಳುವ ಡಿಸೇಲ್ ಚಾಲಿತ ಈ ಬಸ್‌ಗಳನ್ನು ಹಿಂಪಡೆಯಲು ಆರಂಭಿತು,

ಕೊನೆಯ ಬಸ್ ಶುಕ್ರವಾರ ಎಂದಿನಂತೆ ತನ್ನ ಸೇವೆಯನ್ನು ನೀಡಿ ಸಂಜೆ ಸೂರ್ಯ ಮುಳುಗುವ ಹೊತ್ತಿಗೆ ತನ್ನ ಸುದೀರ್ಘ ಸೇವೆಗೆ ಪೂರ್ಣವಿರಾಮ ಹಾಕಿ ಶಾಶ್ವತವಾಗಿ ಡಿಪೊ ಸೇರಿತು.

 


Share Information
Advertisement
Click to comment

You must be logged in to post a comment Login

Leave a Reply