Connect with us

    LATEST NEWS

    ಮುಂಬೈ – ಶಾಲೆ ಲಿಫ್ಟ್ ನಲ್ಲಿ ಸಿಲುಕಿ ಶಿಕ್ಷಕಿ ಸಾವು

    ಮುಂಬೈ ಸೆಪ್ಟೆಂಬರ್ 18: ಮುಂಬೈನಲ್ಲಿ ಶಾಲೆಯ ಲಿಫ್ಟ್‌ನಲ್ಲಿ ಸಿಲುಕಿ 26 ವರ್ಷದ ಶಿಕ್ಷಕಿಯೊಬ್ಬರು ಸಾವನ್ನಪ್ಪಿರುವ ಘಟನೆ ಉತ್ತರ ಮುಂಬೈನ ಉಪನಗರವಾದ ಮಲಾಡ್‌ನ ಚಿಂಚೋಲಿ ಬಂದರ್‌ನಲ್ಲಿರುವ ಸೇಂಟ್ ಮೇರಿಸ್ ಇಂಗ್ಲಿಷ್ ಹೈಸ್ಕೂಲ್‌ನಲ್ಲಿ ನಡೆದಿದೆ.


    ಮೃತರನ್ನು ಜೆನೆಲ್ ಫೆರ್ನಾಂಡಿಸ್ ಎಂದು ಗುರುತಿಸಲಾಗಿದ್ದು, ಇವರು ಮಧ್ಯಾಹ್ನ 1 ಗಂಟೆ ಸುಮಾರಿಗೆ ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ತೆರಳಲು ಆರನೇ ಮಹಡಿಯಲ್ಲಿ ಲಿಪ್ಟ್ ಗೆ ಕಾಯುತ್ತಿದ್ದರು. ಅವರು ಲಿಫ್ಟ್ ಅನ್ನು ಪ್ರವೇಶಿಸಿದಾಗ, ಕೂಡಲೇ ಲಿಪ್ಟ್ ನ ಬಾಗಿಲು ಮುಚ್ಚಲ್ಪಟ್ಟಿತು ಮತ್ತು ಲಿಫ್ಟ್ ಚಲಿಸಲು ಪ್ರಾರಂಭಿಸಿತು, ಮತ್ತು ಅವಳು ಸಿಲುಕಿಕೊಂಡಿದ್ದಳು” ಎಂದು ವಲಯ 11 ರ ಉಪ ಪೊಲೀಸ್ ಆಯುಕ್ತ ವಿಶಾಲ್ ಠಾಕೂರ್ ಹೇಳಿದರು.

    ಶಾಲೆಯ ಸಿಬ್ಬಂದಿ ಆಕೆಗೆ ಸಹಾಯ ಮಾಡಲು ಧಾವಿಸಿದರು ಮತ್ತು ಅವಳನ್ನು ಹೊರಗೆ ಎಳೆದರು ಆದರೆ ತೀವ್ರವಾಗಿ ಗಾಯಗೊಂಡರು. ಕೂಡಲೇ ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply