Connect with us

LATEST NEWS

ಚಂಡೀಗಢ ವಿವಿ ಲೇಡೀಸ್ ಹಾಸ್ಟೆಲ್ ನ 60 ವಿದ್ಯಾರ್ಥಿನಿಯರ ಸ್ನಾನದ ವಿಡಿಯೋ ವೈರಲ್….!!

ಚಂಡೀಗಡ ಸೆಪ್ಟೆಂಬರ್ 18: ಚಂಡೀಗಡ ವಿಶ್ವವಿದ್ಯಾಲಯದ ಲೇಡೀಸ್ ಹಾಸ್ಟೆಲ್ ನಲ್ಲಿನ ಸುಮಾರು 60 ವಿಧ್ಯಾರ್ಥಿನಿಯರ ಸ್ನಾನದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿಧ್ಯಾರ್ಥಿನಿಯರು ಮಧ್ಯರಾತ್ರಿಯಿಂದ ಪ್ರತಿಭಟನೆಗೆ ಇಳಿದಿದ್ದಾರೆ.
ಚಂಡಿಗಢ ವಿಶ್ವವಿದ್ಯಾನಿಲಯದ ಹುಡುಗಿಯರ ಹಾಸ್ಟೇಲ್ ನಲ್ಲಿರುವ ವಿಧ್ಯಾರ್ಥಿನಿಯರಲ್ಲಿ ಕೆಲವರು ಸ್ನಾನ ಮಾಡುವ ದೃಶ್ಯಗಳು ಆನ್ ಲೈನ್ ನಲ್ಲಿ ಲೀಕ್ ಆಗಿದ್ದೇ. ಈ ಹಿನ್ನಲೆ ವಿಧ್ಯಾರ್ಥಿನಿಯರ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿರುವ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.

ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಚಂಡೀಗಡ ಪೊಲೀಸರು ಮಹತ್ವದ ವಿಚಾರವೊಂದನ್ನು ಪತ್ತೆ ಹಚ್ಚಿದ್ದಾರೆ. ಹಾಸ್ಟೆಲ್ ನಲ್ಲಿಯೇ ಇರುವ ವಿದ್ಯಾರ್ಥಿಯೊಬ್ಬಳು ನಾನಾ ಸಂದರ್ಭಗಳಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡುವುದನ್ನು ವಿಡಿಯೋ ಮಾಡಿದ್ದಳು. ಸುಮಾರು 60 ವಿಡಿಯೋಗಳನ್ನು ಆಕೆ ಮಾಡಿದ್ದಳು. ಅವೆಲ್ಲವನ್ನೂ ತನ್ನ ಸಹಪಾಠಿ ಹಾಗೂ ಅದೇ ವಿಶ್ವವಿದ್ಯಾಲಯದ ವಿದ್ಯಾರ್ಥಿಯೊಬ್ಬನಿಗೆ ರವಾನಿಸಿದ್ದಳು. ಆತ, ಅವುಗಳನ್ನು ಆನ್ ಲೈನ್ ನಲ್ಲಿ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ಮಾಡಿದ ವಿದ್ಯಾರ್ಥಿಯು ಅದೇ ವಿಶ್ವವಿದ್ಯಾಲಯದಲ್ಲಿ ಎಂಬಿಎ ಮೊದಲ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ಎಂದು ಹೇಳಲಾಗಿದೆ. ಆಕೆಯ ವಿರುದ್ಧ ಐಪಿಸಿ ಸೆಕ್ಷನ್ 135 ಹಾಗೂ ಐಟಿ ಕಾಯ್ದೆಯ ಅನ್ವಯ ಪ್ರಕರಣ ದಾಖಲಿಸಲಾಗಿದೆ.

Advertisement
Click to comment

You must be logged in to post a comment Login

Leave a Reply