LATEST NEWS
ಕಿಲ್ಲರ್ ಡ್ರಗ್ ಮಾಫಿಯದ ಬೆನ್ನು ಬಿದ್ದ ಮುಂಬೈ ಪೋಲಿಸ್ : ದಯಾ ನಾಯಕ್ ತಂಡದಿಂದ 11.78 ಕೋ. ಮೌಲ್ಯದ ಡ್ರಗ್ ವಶ..!
ಸಮಾಜವನ್ನೇ ನಾಶ ಮಾಡುವ ಕಿಲ್ಲರ್ ಡ್ರಗ್ಸ್ ವಿರುದ್ದ ಮುಂಬೈ ಪೋಲಿಸರು ಸಮರ ಸಾರಿದ್ದಾರೆ. ಮುಂಬೈ ಬಾಂದ್ರಾದ ದಯಾ ನಾಯಕ್ ನೇತೃತ್ವದ ಕ್ರೈಂ ಬ್ರಾಂಚ್ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ 11.78 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದೆ.
ಮುಂಬೈ: ಸಮಾಜವನ್ನೇ ನಾಶ ಮಾಡುವ ಕಿಲ್ಲರ್ ಡ್ರಗ್ಸ್ ವಿರುದ್ದ ಮುಂಬೈ ಪೋಲಿಸರು ಸಮರ ಸಾರಿದ್ದಾರೆ. ಮುಂಬೈ ಬಾಂದ್ರಾದ ದಯಾ ನಾಯಕ್ ನೇತೃತ್ವದ ಕ್ರೈಂ ಬ್ರಾಂಚ್ ತಂಡ ಇಬ್ಬರು ಆರೋಪಿಗಳನ್ನು ಬಂಧಿಸಿ 11.78 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದುಕೊಂಡಿದೆ.
ರಾಹುಲ್ ಕಿಸಾನ್ ಗವಾಲಿ ಮತ್ತು ಅತುಲ್ ಕಿಸಾನ್ ಗವಾಲಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತ ಆರೋಪಿಗಳ ವಿಚಾರಣೆ ಪೊಲೀಸ್ ಅಧಿಕಾರಿ ದಯಾ ನಾಯಕ್ ತಂಡ ಮುಂದುವರೆಸಿದೆ.
ಖಚಿತ ಮಾಹಿತಿ ಮೇರೆಗೆ ಖಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಖಲಾ ಮೈದಾನ ಪಕ್ಕದ ಕಾರ್ಟರ್ ರಸ್ತೆಯ ಗೋಡಾನಿಗೆ ದಾಳಿ ನಡೆಸಿದ ಬಾಂದ್ರಾ ಕ್ರೈಂ ಬ್ರಾಂಚ್ ಅಧಿಕಾರಿ ದಯಾನಾಯಕ್ ನೇತೃತ್ವದ ತಂಡ 5.089 ಕೆಜಿ MD (ಮೆಫೆಡ್ರೋನ್) ನ್ನು ಸ್ವಾಧೀನ ಪಡಿಸಿಕೊಂಡಿದೆ. ಈದರ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ 11 ಕೋಟಿ 78 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದ್ದು ಈ ಸಂಬಂಧ ಸೋಲಾಪುರ ಮೂಲದ ಇಬ್ಬರು ಆರೋಪಿಗಳನ್ನು ತಂಡ ಬಂಧಿಸಿದೆ. ಈ ಸಂಬಂಧ ಖಾರ್ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಲಾಗಿದೆ.ತನಿಖೆ ವೇಳೆ ಸೋಲಾಪುರದಲ್ಲಿ ಎಂಡಿ ಔಷಧ ಉತ್ಪಾದಿಸುವ ಕಾರ್ಖಾನೆಯನ್ನು ಹೊಂದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದು ಅದರಂತೆ ಕಾರ್ಖಾನೆ ಮೇಲೂ ಕ್ರೈಂ ಬ್ರಾಂಚ್ ದಾಳಿ ನಡೆಸಿ ಕಾರ್ಖಾನೆಯಿಂದ 3.10 ಕಿಲೋಗ್ರಾಂ ಮೆಫೆಡ್ರೋನ್ (MD) ವಶಪಡಿಸಿಕೊಂಡಿದ್ದು ಕಾರ್ಖಾನೆಯಲ್ಲಿ ಎಂಡಿ ಉತ್ಪಾದಿಸಲು ಅಗತ್ಯವಾದ 100 ಕೋಟಿಗೂ ಹೆಚ್ಚು ಮೌಲ್ಯದ ಕಚ್ಚಾ ವಸ್ತುಗಳನ್ನು ಪೊಲೀಸರು ವಶಪಡಿಸಿ ಕಾರ್ಖಾನೆಯನ್ನು ಮುಟ್ಟುಗೋಲು ಹಾಕಿದ್ದಾರೆ.
You must be logged in to post a comment Login