FILM
ಉರ್ಫಿ ಜಾವೇದ್ ಪಬ್ಲಿಸಿಟಿ ಗಿಮಿಕ್ ಗೆ ಗರಂ ಆದ ಮುಂಬೈ ಪೊಲೀಸರು – ಈಗ ಬಿತ್ತು ನಿಜವಾದ ಕೇಸ್
ಮುಂಬೈ ನವೆಂಬರ್ 04: ತನ್ನ ವಿಚಿತ್ರವಾದ ಉಡುಗೆಗಳಿಂದ ಪಬ್ಲಿಸಿಟಿ ಪಡೆದು ಜೀವನ ನಡೆಸುತ್ತಿದ್ದ ಮಾಡೆಲ್ ಮಾಜಿ ಬಿಗ್ ಬಾಸ್ ಸ್ಪರ್ಧಿ ಉರ್ಫಿ ಜಾವೇದ್ ಇದೀಗ ಮುಂಬೈ ಪೊಲೀಸ್ ವಿಚಾರದಲ್ಲಿ ಚೀಪ್ ಪಬ್ಲಿಸಿಟಿ ಮಾಡಲು ಹೋಗಿ ಕೇಸ್ ಹಾಕಿಸಿಕೊಂಡಿದ್ದಾರೆ.
ನಿನ್ನೆ ಸಾಮಾಜಿಕ ಜಾಲಾತಣದಲ್ಲಿ ವಿಡಿಯೋ ಒಂದು ವೈರಲ್ ಆಗಿತ್ತು, ಅದರಲ್ಲಿ ಮಾಡೆಲ್ ಉರ್ಫಿ ಜಾವೇದ್ ಅವರನ್ನು ಮುಂಬೈ ಪೊಲೀಸರು ಅರೆಸ್ಟ್ ಮಾಡಿ ಕೊಂಡೊಯ್ಯುತ್ತಿರುವುದಾಗಿ ಸುದ್ದಿಯಾಗಿದ್ದು, ಇದು ಇಡೀ ದಿನ ಸಾಮಾಜಿಕ ಜಾಲತಾಮದಲ್ಲಿ ಟ್ರೆಂಡಿಂಗ್ ನಲ್ಲಿತ್ತು, ಇದೀಗ ಈ ಸುದ್ದಿಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ಸ್ಪಷ್ಟನೆ ನೀಡಿದ್ದು, ನಾವು ಉರ್ಫಿ ಜಾವೇದ್ ಅವರನ್ನು ಅರೆಸ್ಟ್ ಮಾಡಿಲ್ಲ ಎಂದು ತಿಳಿಸಿದೆ.
ಅಲ್ಲದೆ ಮುಂಬೈ ಪೊಲೀಸರ ಹೆಸರಿಗೆ ಕಳಂಕ ತರುವ ರೀತಿಯಲ್ಲಿ ವರ್ತಿಸಿದ್ದಕ್ಕೆ ಉರ್ಫಿ ಜಾವೇದ್ ಸೇರಿದಂತೆ ವೈರಲ್ ವಿಡಿಯೋದಲ್ಲಿದ್ದ ಎಲ್ಲರ ಮೇಲೆ ಮಾನಹಾನಿ ಪ್ರಕರಣ ದಾಖಲಿಸಿದೆ. ಚೀಪ್ ಪಬ್ಲಿಸಿಟಿಗಾಗಿ ಮಾಡಿದ ವೀಡಿಯೋ ಇದಾಗಿದ್ದು ಇದರೊಂದಿಗೆ ಪೊಲೀಸ್ ಚಿಹ್ನೆ ಮತ್ತು ಸಮವಸ್ತ್ರ ದುರ್ಬಳಕೆ ಮಾಡುವ ಮೂಲಕ ಕಾನೂನು ಉಲ್ಲಂಘನೆ ಮಾಡಿದ್ದಾರೆ ಅಂತ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಸಮಾಜವನ್ನು ದಾರಿತಪ್ಪಿಸುವ ಈ ವಿಡಿಯೋದಲ್ಲಿ ಭಾಗಿಯಾಗಿರುವವರ ವಿರುದ್ಧ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 171, 419, 500, 34 ಐಪಿಸಿ ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದ್ದು, ಈ ವೇಳೆ ನಕಲಿ ಪೊಲೀಸರನ್ನು ಬಂಧಿಸಲಾಗಿದೆ ಮತ್ತು ವೀಡಿಯೋಗೆ ಬಳಸಿದ್ದ ವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ