Connect with us

    KARNATAKA

    ನಿದ್ದೆಯ ಮಂಪರು, ಮೂಡಿಗೆರೆಯಲ್ಲಿ ಪ್ರಪಾತಕ್ಕೆ ಉರುಳಿದ ಬಸ್- ಓರ್ವ ಮಹಿಳೆ ಮೃತ್ಯು, 5 ಗಂಭೀರ..!

    ಚಿಕ್ಕಮಗಳೂರು : ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿಬಿದ್ದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ, ಐವರು ಗಂಭೀರವಾಗಿ ಗಾಯಗೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚೀಕನಹಳ್ಳಿ – ಕಸ್ಕೇಬೈಲು ಕ್ರಾಸ್ ಬಳಿ ಶನಿವಾರ ಮುಂಜಾನೆ ಸಂಭವಿಸಿದೆ.

    ಬೆಂಗಳೂರಿನ ಯಲಹಂಕ ನಿವಾಸಿ ಸುರೇಖಾ(45) ಮೃತ ದುರ್ದೈವಿಯಾಗಿದ್ದಾರೆ. ಬೆಂಗಳೂರಿನಿಂದ ಬೆಂಗಳೂರು-ಹಾಸನ-ಮೂಡಿಗೆರೆ ಮಾರ್ಗವಾಗಿ ಹೊರನಾಡಿಗೆ ಪ್ರವಾಸ ಹೊರಟಿದ್ದ ಈ ಬಸ್ಸಿನಲ್ಲಿ 48ಕ್ಕೂ ಹೆಚ್ಚು ಪ್ರವಾಸಿಗರಿದ್ದರು. ಇಂದು ಬೆಳಗಿನ ಜಾವ 4:45ರ ವೇಳೆ ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಚೀಕನಹಳ್ಳಿ – ಕಸ್ಕೇಬೈಲು ಕ್ರಾಸ್ ಬಳಿ ಬಸ್ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ ಎನ್ನಲಾಗುತ್ತಿದ್ದರೂ ನಿದ್ದೆಯ ಮಂಪರಿನಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ.  ಗಾಯಾಳುಗಳನ್ನು ಮೂಡಿಗೆರೆ, ಬೇಲೂರು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply