Connect with us

    FILM

    ಹೆಂಡತಿಯ ಮೇಲೆ ಕಾರು ಹರಿಸಿದ ಸಿನೆಮಾ ನಿರ್ಮಾಪಕ…!!

    ಮುಂಬೈ ಅಕ್ಟೋಬರ್ 27: ಕಾರಿನಲ್ಲಿ ಪರಸ್ತ್ರೀ ಜೊತೆ ಇರುವುದನ್ನ ಕಂಡ ಹೆಂಡತಿಯ ಮೇಲೆ ಬಾಲಿವುಡ್ ಸಿನೆಮಾ ನಿರ್ಮಾಪಕ ಕಾರು ಹರಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.


    ಸಿನೆಮಾ ನಿರ್ಮಾಪಕ ಕಮಲ್‌ ಕಿಶೋರ್‌ ಮಿಶ್ರಾ ವಿರುದ್ಧ ತಮ್ಮ ಮೇಲೆ ಕಾರು ಹರಿಸಿ ಗಾಯಗೊಳಿಸಿದ್ದಾರೆ ಎಂದು ಆರೋಪಿಸಿ ಪತ್ನಿ ದೂರು ದಾಖಲಿಸಿದ್ದಾರೆ. ಕಾರಿನಲ್ಲಿ ಮತ್ತೊಬ್ಬ ಮಹಿಳೆ ಜೊತೆಗೆ ಇರುವುದನ್ನು ಪತ್ನಿ ಗಮನಿಸಿದರೆಂಬ ಗಡಿಬಿಡಿಯಲ್ಲಿ ತಪ್ಪಿಸಿಕೊಳ್ಳಲು ಕಿಶೋರ್‌ ಮಿಶ್ರಾ ಯತ್ನಿಸಿದಾಗ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಿಶ್ರಾ ಅವರ ಪತ್ನಿ ಗಾಯಗೊಂಡಿದ್ದಾರೆ.

    ಅಕ್ಟೋಬರ್‌ 19ರಂದು ಸಬ್‌ಅರ್ಬನ್‌ ಅಂಧೇರಿಯಲ್ಲಿ ಈ ಘಟನೆ ನಡೆದಿದ್ದು, ಮಿಶ್ರಾ ಅವರ ಪತ್ನಿಯು ಪತಿಯನ್ನು ಹುಡುಕುತ್ತ ಹೊರಗೆ ಬಂದಿದ್ದಾರೆ. ಈ ಸಂದರ್ಭ ಪಾರ್ಕಿಂಗ್‌ ಪ್ರದೇಶದಲ್ಲಿ ಬೇರೆ ಮಹಿಳೆಯ ಜೊತೆ ಕಾರನಲ್ಲಿ ಇರುವುದನ್ನು ಗಮನಿಸಿದ್ದಾರೆ. ತಡೆಯಲು ಬಂದ ಪತ್ನಿಯಿಂದ ತಪ್ಪಿಸಿಕೊಳ್ಳಲು ಮಿಶ್ರಾ ಕಾರನ್ನು ಜೋರಾಗಿ ಓಡಿಸಿದ್ದಾರೆ. ಈ ಸಂದರ್ಭ ಪತ್ನಿಗೆ ಕಾರು ಗುದ್ದಿದೆ. ಪತ್ನಿಯ ಕೈ, ಕಾಲು ಹಾಗೂ ತಲೆಗೆ ಗಾಯವಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. ಮಿಶ್ರಾ ವಿರುದ್ಧ ಅಂಬೋಲಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ. ಮಿಶ್ರಾ ಅವರು ‘ದೆಹಾತಿ ಡಿಸ್ಕೊ’ ಹಿಂದಿ ಸಿನಿಮಾವನ್ನು ನಿರ್ಮಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply