Connect with us

    LATEST NEWS

    ಪೊಳಲಿ ದೇವಸ್ಥಾನದಲ್ಲಿ ಸ್ವಯಂಸೇವಕಿಯಾದ ಸಂಸದೆ ಶೋಭಾಕರಂದ್ಲಾಜೆ

    ಪೊಳಲಿ ದೇವಸ್ಥಾನದಲ್ಲಿ ಸ್ವಯಂಸೇವಕಿಯಾದ ಸಂಸದೆ ಶೋಭಾಕರಂದ್ಲಾಜೆ

    ಮಂಗಳೂರು ಮಾರ್ಚ್ 13: ಇತಿಹಾಸ ಪ್ರಸಿದ್ದ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲೋಶೋತ್ಸವದ ಸಂಭ್ರಮ. ಬ್ರಹ್ಮಕಲಶೋತ್ಸವದ ಅಂತಿಮ ದಿನವಾದ ಇಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ದೇವಸ್ಥಾನದಲ್ಲಿ ಸ್ವಯಂಸೇವಕರಾಗಿ ದೇವರ ಸೇವೆ ಮಾಡಿದರು.

    ಸುಮಾರು 800 ವರ್ಷಗಳ‌ ಇತಿಹಾಸ ಹೊಂದಿರುವ ಪೊಳಲಿ ಶ್ರೀ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವದ ಅಂತಿಮ ದಿನವಾಗಿದ್ದು, ದೇವಸ್ಥಾನದಲ್ಲಿ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದಿದ್ದಾರೆ. ಮೊನ್ನೆ ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ಅವರು ಪೊಳಲಿ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಮುಖಂಡರ‌ ಜತೆ ಸಂಸದೆ ಶೋಭಾ ಕೂಡಾ ಭೇಟಿ ನೀಡಿದ್ದರು.

    ಇಂದು ಮತ್ತೆ ಕ್ಷೇತ್ರಕ್ಕೆ ಭೇಟಿ‌ ನೀಡಿ ಶ್ರೀ ರಾಜರಾಜೇಶ್ವರಿಯ ದರ್ಶನ ಭಾಗ್ಯ ಪಡೆದ ಅವರು ಬಳಿಕ ಸ್ವಯಂ ಸೇವಕರಾಗಿ ಕೆಲಸ ಮಾಡಿದರು. ಕ್ಷೇತ್ರಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾಧಿಗಳಿಗಾಗಿ ಪಾಕಶಾಲೆಯಲ್ಲಿ ಭಾರೀ ಪ್ರಮಾಣದಲ್ಲಿ ವಿವಿಧ ರೀತಿಯ ಆಹಾರ ತಯಾರಿಸಲಾಗುತ್ತಿದ್ದು, ಸಂಸದೆ ಶೋಭಾ ಕೂಡಾ ಪಾಕಶಾಲೆಗೆ ತೆರಳಿ ತರಕಾರಿ ಕತ್ತರಿಸುವ ಮೂಲಕ ಸಾಮಾನ್ಯ ಮಹಿಳೆಯರ ನಡುವೆ ಗುರುತಿಸಿಕೊಂಡಿದ್ದಾರೆ.

    ಪದಾರ್ಥಗಳ ತಯಾರಿಗೆ ಅಗತ್ಯ ತರಕಾರಿಗಳನ್ನು ಕತ್ತರಿಸುತ್ತಿರುವ ಮಹಿಳೆಯರ‌ ನಡುವೆ ಕುಳಿತ ಶೋಭಾ ಕರಂದ್ಲಾಜೆ, ತಾನೂ ಕೂಡಾ ತರಕಾರಿ ಕತ್ತರಿಸುವ ಮೂಲಕ ದೇವರ ಸೇವೆಯಲ್ಲಿ ತನ್ನ ಪಾಲು ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply