LATEST NEWS
ಗಾಂಜಾ ದಂಧೆಯ ಹಣದ ಹಿಂದೆ ಜಿಲ್ಲೆಯ ಕಾಂಗ್ರೇಸ್ ನಾಯಕರು – ನಳಿನ್ ಕುಮಾರ್ ಕಟೀಲ್

ಗಾಂಜಾ ದಂಧೆಯ ಹಣದ ಹಿಂದೆ ಜಿಲ್ಲೆಯ ಕಾಂಗ್ರೇಸ್ ನಾಯಕರು – ನಳಿನ್ ಕುಮಾರ್ ಕಟೀಲ್
ಮಂಗಳೂರು ಅಕ್ಟೋಬರ್ 6: ದಕ್ಷಿಣಕನ್ನಡ ಜಿಲ್ಲೆಯ ಕಾಂಗ್ರೇಸ್ ನ ಪ್ರಮುಖ ನಾಯಕರು ಗಾಂಜಾ ದಂಧೆಯ ಹಣದ ಹಿಂದೆ ಬಿದ್ದಿದ್ದು ಗಾಂಜಾ ದಂಧೆಯ ಹಣದಿಂದ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ ಎಂದು ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ. ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಬಿಜೆಪಿ ಕಾರ್ಯಕರ್ತ ಜುಬೈರ್ ಕೊಲೆಯ ಹಿಂದೆ ಗಾಂಜಾ ಮಾಫಿಯಾ ಕೈವಾಡವಿದೆ ಎಂದು ಅವರು ಆರೋಪಿಸಿದರು. ಈ ಗಾಂಜಾ ದಂಧೆ ಕಾಂಗ್ರೇಸ್ ನಾಯಕರ ಕೃಪಾಪೋಷಣೆಯಿಂದ ನಡೆಯುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಜುಬೇರ್ ಕುಟುಂಬಕ್ಕೆ ನ್ಯಾಯ ಒದಗಿಸಬೇಕಾಗಿದ್ದು, ಜುಬೇರ್ ಹತ್ಯಾ ಪ್ರಕರಣವನ್ನು ತನಿಖೆಗೆ ಎನ್ಐಎ ಗೆ ವಹಿಸುವಂತೆ ಅವರು ಒತ್ತಾಯಿಸಿದರು.

ಜಿಲ್ಲೆಯಲ್ಲಿ ನಡೆಯುತ್ತಿರುವ ಕೊಲೆಗಳಿಗೆ ಕಾಂಗ್ರೇಸ್ ಸರಕಾರ ನೇರ ಹೊಣೆಯಾಗಿದ್ದು , ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ದೂರಿದರು. ಜಿಲ್ಲೆಯ ಹಳ್ಳಿ ಹಳ್ಳಿಗಳಲ್ಲಿ ಗಾಂಜಾ ದೊರೆಯುವಂತಾಗಿದ್ದು ಇದು ಪೊಲೀಸ್ ಇಲಾಖೆಯ ನಿಷ್ಕ್ರೀಯತೆಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ತಾಕತ್ತಿದ್ದರೆ ಗಾಂಜಾ ದಂಧೆಕೋರರನ್ನು ಈ ಕೂಡಲೇ ಬಂಧಿಸಬೇಕೆಂದು ಅವರು ಸವಾಲನ್ನು ಹಾಕಿದರು.
ಕೇರಳದ ರಕ್ತಸಿಕ್ತ ರಾಜಕೀಯವನ್ನು ದಕ್ಷಿಣ ಜಿಲ್ಲೆಯಲ್ಲಿ ಬೆಳೆಸಲು ಕಾಂಗ್ರೇಸ್ ಜಿಲ್ಲೆಯ ಗಲ್ಲಿ ಗಲ್ಲಿಗಳಲ್ಲಿ ರೌಡಿ ಗ್ಯಾಂಗ್ ಗಳನ್ನು ಬೆಳೆಸುತ್ತಿದೆ ಎಂದು ಅವರು ಆರೋಪಿಸಿದರು.