Connect with us

  LATEST NEWS

  ಸಚಿವ ಯು.ಟಿ ಖಾದರ್ ಕಾರಿಗೆ ಕಲ್ಲು ತೂರಾಟ

  ಸಚಿವ ಯು.ಟಿ ಖಾದರ್ ಕಾರಿಗೆ ಕಲ್ಲು ತೂರಾಟ

  ಮಂಗಳೂರು ಅಕ್ಟೋಬರ್ 06: ಉಳ್ಳಾಲದ ಮುಕ್ಕಚ್ಚೆರಿಯಲ್ಲಿ ಸಚಿವ ಯು.ಟಿ ಖಾದರ್ ಕಾರಿಗೆ ಉದ್ರಿಕ್ತರಿಂದ ಕಲ್ಲು ತೂರಾಟ ನಡೆದಿದೆ. ಮೊನ್ನೆ ಹತ್ಯೆಗೀಡಾದ ಜುಬೇರ್ ಮನೆಗೆ ಭೇಟಿ ನೀಡಲು ಸಚಿವ ಯು.ಟಿ ಖಾದರ್ ಉಳ್ಳಾಲದ ಮುಕ್ಕಚ್ಚೇರಿಗೆ ತೆರಳಿದ್ದರು.

  ಈ ಸಂದರ್ಭದಲ್ಲಿ ಸ್ಥಳೀಯರು ಸಚಿವ ಯು.ಟಿ ಖಾದರ್ ಅವರನ್ನು ಸ್ಥಳದಿಂದ ತೆರಳುವಂತೆ ಎಚ್ಚರಿಸಿದರು. ಈ ಹಿನ್ನಲೆಯಲ್ಲಿ ಸ್ಥಳೀಯರಿಗೂ ಹಾಗೂ ಯು.ಟಿ ಖಾದರ್ ಬೆಂಬಲಿತರಿಗೂ ಮಾತಿನ ಚಕಮಕಿ ನಡೆದು, ಘರ್ಷಣೆಗೆ ಮುಂದಾಗಿದ್ದರು, ಜುಬೇರ್ ಅವರ ಮೃತದೇಹ ನೋಡಲು ಬಾರದ ಸಚಿವ ಯು.ಟಿ ಖಾದರ್ ಈಗ ಮನೆಗೆ ಭೇಟಿ ನೀಡಲು ಬಂದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

  ಈ ಸಂದರ್ಭದಲ್ಲಿ ಉದ್ರಿಕ್ತರ ಗುಂಪು ಯು.ಟಿ ಖಾದರ್ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದೆ.

  VIDEO

  Share Information
  Advertisement
  Click to comment

  You must be logged in to post a comment Login

  Leave a Reply