Connect with us

  LATEST NEWS

  GST ಎಫೆಕ್ಟ್ ಸಂಕಷ್ಟದಲ್ಲಿ ಕರಾವಳಿಯ ಮೀನುಗಾರ

  ಇಳುವರಿ ಇದ್ದರೂ ಸಿಗದ ದರ :ಸಂಕಷ್ಟದಲ್ಲಿ ಕರಾವಳಿಯ ಮೀನುಗಾರ

  ಮಂಗಳೂರು, ಅಕ್ಟೋಬರ್ 06 : ಸಾವಿರಾರೂ ಕುಟುಂಬಗಳ ಆಧಾರ ಸ್ತಂಭವಾಗಿರುವ ಕರಾವಳಿಯ ಮೀನುಗಾರಿಕೆಗೆ ದೊಡ್ಡ ಹೊಡೆತ ಬಿದ್ದಿದೆ. ಕರಾವಳಿಯ ಜನರ ಪ್ರಮುಖ ಉದ್ಯಮವಾಗಿರುವ ಮೀನುಗಾರಿಕೆ ನಷ್ಟದಲ್ಲಿ ನಡೆಯುತ್ತಿದೆ. ಇದಕ್ಕೆ ಕಾರಣಗಳು ಮಾತ್ರ ನಿಗೂಢ.

  ಕರಾವಳಿಯಲ್ಲಿ ದೈನಂದಿನ ಮೀನಿನ ಮೌಲ್ಯ ಕುಸಿದಿದೆ. ಮೀನುಗಾರಿಕೆಯನ್ನೇ ನಂಬಿರುವ ಕರಾವಳಿಯ ಬಹುಪಾಲು ಜನರು ಸಂಕಷ್ಟದಲ್ಲಿದ್ದಾರೆ.
  ಈ ಬಾರಿಯ ಹವಮಾನ ಈ ಹಿಂದಿಗಿಂತ ಹೆಚ್ಚು ಉತ್ತಮವಾಗಿದ್ದು, ಕರಾವಳಿಯ ಮೀನುಗಾರರಿಗೆ ಆಶಾದಾಯಕವಾಗಿತ್ತು.

  ಉತ್ತಮ ಮೀನಿನ ಇಳುವರಿ ದೊರೆಯುತ್ತಿರುವ ಹಿನ್ನೆಲೆಯಲ್ಲಿ ಮೀನುಗಾರ ಖುಶಿಯಲ್ಲಿದ್ದ. ಆದರೆ ಈ ಖುಷಿ ಹೆಚ್ಚು ದಿನ ಉಳಿಯಲಿಲ್ಲ. ಒಳ್ಳೆ ಇಳುವರಿ ಆಗುತ್ತಿವುದರಿಂದ ಬಂಪರ್ ಆದಾಯದ ನಿರೀಕ್ಷೆಯಲ್ಲಿದ್ದ ಮೀನುಗಾರ ದಿನದದಿಂದ ದಿನಕ್ಕೆ  ಪಾತಾಳಕ್ಕೆ ಕುಸಿಯುತ್ತಿರುವ ಮೀನು ದರದಿಂದ ಕಂಗಾಲಾಗಿದ್ದಾನೆ.

  ಜಿ ಎಸ್ ಟಿ ಯಿಂದ ಮೀನುಗಾರಿಕೆಗೆ ತೊಂದರೆ:

  ಕೇಂದ್ರ ಸರ್ಕಾರದ ಜಿ ಎಸ್ ಟಿ ಯಿಂದ ಮೀನುಗಾರಿಕಾ ಸಲಕರಣೆಗಳು, ಉಪಕರಣಗಳ ಬೆಲೆಯಲ್ಲಿ ಹೆಚ್ಚಳ ಕಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಮೀನುಗಾರಿಕೆಗೆ ಸಂಬಂಧಿಸಿದ ಎಲ್ಲ ವಸ್ತುಗಳ ಮೇಲೆ ಜಿಎಸ್‌ಟಿ ವಿಧಿಸಲಾಗಿದೆ. ಯಾವುದೇ ಖರೀದಿ ಮಾಡಿದರೂ ಬಿಲ್‌ ಕೊಡುತ್ತಾರೆ. ಆಗ ಜಿಎಸ್‌ಟಿ ಸೇರಿಸಲಾಗುತ್ತದೆ. ಅದರ ಮೇಲೆ ಬರೆ ಎಂಬಂತೆ ಮೀನುಗಾರಿಕೆಗೆ ಬೇಕಾಗಿರುವ ಮಂಜುಗಡ್ಡೆಗೆ ಶೇ 5 ರಷ್ಟು ಹೆಚ್ಚುವರಿ ತೆರಿಗೆ ಬೀಳುತ್ತಿದೆ.

  ಇದರಿಂದ ಮೀನುಗಾರರು ತೀವೃ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ದಿನ ಪ್ರತಿ ಮೀನುಗಾರಿಕೆ ನಡೆಸುವ ಪರ್ಸೀನ್ ಬೋಟುಗಳಿಗಿಂತ 7 ರಿಂದ 10 ದಿನಗಳ ಕಾಲ ಸಮುದ್ರದಲ್ಲೇ ಇದ್ದು ಮೀನುಗಾರಿಕೆ ನಡೆಸುವ ಟ್ರಾಲ್ ಬೋಟು ಮೀನುಗಾರಿಕೆ ಅತೀ ಹೆಚ್ಚಿನ ನಷ್ಟ ಅನುಭವಿಸುತ್ತಿದೆ.

  ಸರಣಿ ಅತ್ಮಹತ್ಯೆಯತ್ತ ಮೀನುಗಾರು :

  ಒಮ್ಮೆ ಆಳ ಸಮುದ್ದರ ಮೀನುಕಾರಿಕೆ ನಡೆಸಬೇಕಾದರೆ ಡಿಸೇಲ್, ಮೀನುಗಾರರ ಮಜೂರಿ, ಮಂಜುಗಡ್ಡೆ ಹೀಗೆ ಸುಮಾರು 5 ಲಕ್ಷ ರೂಪಾಯಿಗಳ ಖರ್ಚು ಬರುತ್ತಿದೆ. ಇಳುವರಿಯೂ ಉತ್ತಮವಾಗಿದೆ.

  ಆದರೆ ಮೀನಿಗೇ ಮಾತ್ರ ದರ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಲಕ್ಷಾಂತರ ರೂಪಾಯಿಗಳ ಸಾಲಮಾಡಿ ಬೋಟುಗಳನ್ನು ಖರೀದಿಸಿ ಇದೀಗ ದರ ಕುಸಿತದಿಂದ ಕಂಗಕಾಗಿರುವ ಮೀನುಗಾರರು ಇದೇ ಪರಿಸ್ಥಿತಿ ಮುಂದುವರೆದರೆ ಸರಣಿ ಅತ್ಮಹತ್ಯೆ ಮಾಡುವ ಸ್ಥಿತಿ ಎದುರಾಗಬಹುದು ಎಂಬ ಅತಂಕ ಮೀನುಗಾರಿಕಾ ಬೋಟು ಮಾಲಕರದ್ದು.

  ಮೀನಿನ ಪೂರೈಕೆ ಹೆಚ್ಚಿದಂತೆ ಮಾರುಕಟ್ಟೆಯಲ್ಲಿ ಬೆಲೆ ಕುಸಿತವಾಗಿದೆ. ಎರಡು ತಿಂಗಳ ಹಿಂದೆ 270 ಇದ್ದ ಬಂಗುಡೆ ಮೀನಿನ ಬೆಲೆ ಇದೀಗ 150 ಕ್ಕೆ ಇಳಿದಿದೆ. 800 ಕ್ಕೆ ಏರಿದ್ದ ಅಂಜಲ್‌ 400ಕ್ಕೆ ಇಳಿದಿದೆ. 180 ಇದ್ದ ಭೂತಾಯಿ ಮೀನಿನ ಬೆಲೆ 60 ಕ್ಕೆ ಇಳಿದಿದೆ.ಇದೀಗ ಸರ್ಕಾರಗಳೇ ಇದಕ್ಕೆ ಏನಾದರೂ ಪರಿಹಾರ ಕಂಡುಕೊಂಡು ಮೀನುಗಾರರ ಹಿತ ಕಾಪಾಡಬೇಕಿದೆ.

  Share Information
  Advertisement
  Click to comment

  You must be logged in to post a comment Login

  Leave a Reply