Connect with us

    LATEST NEWS

    ಮೂರು ವರ್ಷಗಳ ಬಳಿಕ ಮಗನನ್ನು ಕಂಡ ತಾಯಿ – ಆ ಅಮೃತ ಘಳಿಗೆಯ ವಿಡಿಯೋ ವೈರಲ್

    ಉಡುಪಿ ಸೆಪ್ಟೆಂಬರ್ 21: ತಾಯಿ ಮಗನ ಪ್ರೀತಿ ಭಾಂದವ್ಯಕ್ಕೆ ಸರಿಸಾಟಿ ಯಾರು ಇಲ್ಲ ಎನ್ನವುದಕ್ಕೆ ಈ ವಿಡಿಯೋ ಸಾಕ್ಷಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋ ಎಂತವರ ಕಣ್ಣಲ್ಲೂ ನೀರನ್ನು ತರಿಸುವಂತದ್ದು, ಮೂರು ವರ್ಷಗಳ ಬಳಿಕ ಮಗನ ನೋಡಿ ತಾಯಿ ತನ್ನ ಮಮತೆಯನ್ನು ವ್ಯಕ್ತಪಡಿಸುವ ವಿಡಿಯೋ ಇದು.


    ಉಳಿದವರು ಕಂಡಂತೆ ಸಿನಿಮಾದಲ್ಲಿ ಬರುವ ತಾಯಿಯ ಅಪ್ಪುಗೆ ಬೆಳೆದ ಮರವಾಗಿ, ನಿಂತರೆ ತಲೆ ಬಾಗಿ ಈ ಭೂಮಿ ಮೀಟಿ ಸ್ವರ್ಗವನ್ನೇ ಮತ್ತೆ ಚಿಗುರಿಸಿದೆ ಎಂಬ ಹಾಡನ್ನು ಹೇಳಿ ರೋಮಾಂಚನ ಗೊಂಡವರು ಸಾವಿರಾರು. ಅದೇ ರೀತಿ ಮೀನು ಮಾರುವ ತಾಯಿಯೊಬ್ಬಳು ವಿದೇಶದಿಂದ ಬಂದ ತನ್ನ ಮಗನನ್ನು ಅಪ್ಪಿಕೊಳ್ಳುವ ಘಟನೆ ಉಡುಪಿಯಲ್ಲಿ ನಡೆದಿದೆ.


    ಗಂಗೊಳ್ಳಿ ನಿವಾಸಿ ರೋಹಿತ್ ಎಂಬುವವರು 3 ವರುಷಗಳ ನಂತರ ದುಬೈನಿಂದ ತಾಯ್ನಾಡಿಗೆ ಮರಳಿ ಬಂದಿದ್ದಾರೆ. ಆದರೆ ಅವರು ಬರುವುದನ್ನು ತಮ್ಮ ತಾಯಿಗೆ ತಿಳಿಸಿಲ್ಲ. ತನ್ನ ತಾಯಿ ಸುಮಿತ್ರರಿಗೆ ತಿಳಿಸದೇ ಸರ್ಪ್ರೈಸ್ ಕೊಡಲು ಮುಂದಾಗಿದ್ದಾರೆ. ತಾಯಿ ಎಂದಿನಂತೆ ಗಂಗೊಳ್ಳಿ ಬಂದರಿನ ಮೀನು ಮಾರುಕಟ್ಟೆಯಲ್ಲಿ ಮೀನು ಮಾರುತ್ತಿದ್ರು. ಈ ವೇಳೆ ರೋಹಿತ್ ಅವರು ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮುಖವನ್ನು ಮರೆ ಮಾಚಿಸಿ ತಾಯಿಯ ಮುಂದೆ ಬಂದು ನಿಂತು ಮೀನು ವ್ಯಾಪಾರ ಮಾಡಿದ್ದಾರೆ. ಅಷ್ಟರಲ್ಲೇ ಮಗನ ಧ್ವನಿಯನ್ನು ಗುರುತಿಸಿದ ತಾಯಿ ಮುಖದ ಮೇಲಿನ ಬಟ್ಟೆ ಸರಿಸಿ ಮಗನನ್ನು ಅಪ್ಪಿಕೊಂಡು ಮುದ್ದಾಡಿದ್ದಾರೆ.

    ಮೂರು ವರ್ಷದ ಬಳಿಕ ಬಂದ ಮಗನನ್ನು ನೋಡುತ್ತಿದ್ದಂತೆ ತಾಯಿಯ ಕಣ್ಣಾಲೆಗಳು ಒದ್ದೆಯಾಗಿದ್ದವು. ತಾಯಿ-ಮಗನ ಈ ವಿಡಿಯೋ ವೈರಲ್ ಆಗುತ್ತಿದ್ದು ವಿಡಿಯೋ ನೋಡಿದವರ ಕಣ್ಣುಗಳಲ್ಲಿ ನೀರು ಸುಲಿದಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply