Connect with us

    LATEST NEWS

    ಭಜರಂಗದಳದ ನೇತೃತ್ವದಲ್ಲಿ ಸೆಪ್ಟೆಂಬರ್ 25 ರಿಂದ ರಾಜ್ಯಾದ್ಯಂತ ಶೌರ್ಯ ಜಾಗರಣ ರಥಯಾತ್ರೆ

    ಮಂಗಳೂರು ಸೆಪ್ಟೆಂಬರ್ 21:ಇಂದಿನ ಯುವಪೀಳಿಗೆಗೆ ನಮ್ಮ ಪೂರ್ವಜರು ತೋರಿಸಿದ ಶೌರ್ಯ ಪರಾಕ್ರಮ, ಬಲಿದಾನಗಳನ್ನು ನೆನಪಿಸಿ, ಅವರನ್ನು ಜಾಗೃತಗೊಳಿಸಿ, ಅವರ ಜೀವನ ಪ್ರೇರಣೆ ಪಡೆದು ದೇಶಕೋಸ್ಕರ, ಧರ್ಮಕೋಸ್ಕರ ಬದುಕಲು ಸಂಕಲ್ಪ ಮಾಡುವ ಉದ್ದೇಶದಿಂದ ಬಜರಂಗದಳದ ನೇತೃತ್ವದಲ್ಲಿ ಸೆಪ್ಟೆಂಬರ್ 25 ರಿಂದ ರಾಜ್ಯಾದ್ಯಂತ ಶೌರ್ಯ ಜಾಗರಣ ರಥಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ ಎಂದು ವಿಎಚ್ ಪಿ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.


    ಶೌರ್ಯ ಜಾಗರಣ ರಥಯಾತ್ರೆ ಸೆಪ್ಟೆಂಬರ್ 25 ರಂದು ಚಿತ್ರದುರ್ಗದಲ್ಲಿ ಉದ್ಘಾಟನೆಗೊಳ್ಳಲಿದ್ದು, ಅಕ್ಟೋಬರ್ 10 ರಂದು ಉಡುಪಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಚಿತ್ರದುರ್ಗ ದಲ್ಲಿ ಸೆಪ್ಟೆಂಬರ್ 21 ರಂದು ಉದ್ಘಾಟನೆಗೊಂಡು ದಾವಣಗೆರೆ, ಶಿವಮೊಗ್ಗ, ಸಾಗರ, ಶೃಂಗೇರಿ, ಬಾಳೆಹೊನ್ನೂರು, ಚಿಕ್ಕಮಂಗಳೂರು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಮಂಡ್ಯ, ಮೈಸೂರು, ಕೊಡಗು, ಸುಳ್ಯ, ಪುತ್ತೂರು, ಮಂಗಳೂರು ಮೂಲಕ ಉಡುಪಿಯಲ್ಲಿ ಅಕ್ಟೋಬರ್ 10 ಸಮಾರೋಪಗೊಳ್ಳಲಿದೆ. ಈ ರಥಯಾತ್ರೆ ಸಾಗುವ ಎಲ್ಲಾ ಜಿಲ್ಲೆಗಳಲ್ಲಿ ಬೃಹತ್‌ ಸಾರ್ವಜನಿಕ ಸಭೆಗಳು ನಡೆಯಲಿವೆ ಎಂದು ಶರಣ್ ಪಂಪ್ ವೆಲ್ ತಿಳಿಸಿದರು.


    ಕರಾವಳಿ ಜಿಲ್ಲೆಗಳಾದ ದಕ್ಷಿಣಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ಬೃಹತ್ ಶೋಭಾಯಾತ್ರೆ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದೆ. ಈ ಶೌರ್ಯ ಜಾಗರಣ ರಥಯಾತ್ರೆ ಸುಳ್ಯದಲ್ಲಿ ಬೃಹತ್ ಕಾರ್ಯಕ್ರಮದ ಮೂಲಕ ರಥಯಾತ್ರೆಯನ್ನು ಸ್ವಾಗತಿಸಲಿದ್ದು, ಅಕ್ಟೋಬರ್ 7 ರಂದು ಪುತ್ತೂರು ನಗರದಲ್ಲಿ ಬೃಹತ್ ಸಾರ್ವಜನಿಕ ಸಭೆ, ಅಕ್ಟೋಬರ್ 9 ರಂದು ಮಂಗಳೂರಿನಲ್ಲಿ ಬೃಹತ್ ಶೋಭಾಯಾತ್ರೆಯೊಂದಿಗೆ ಕದ್ರಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಈ ರಥಯಾತ್ರೆಯ ಸಮಾರೋಪ ಕಾರ್ಯಕ್ರಮವು ಉಡುಪಿಯಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ಕಾರ್ಯಕ್ರಮದ ಮೂಲಕ ಸಂಪನ್ನಗೊಳ್ಳಲಿದೆ ಎಂದು ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply