KARNATAKA
ಇಂದು ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಮೋಸ್ಟ್ ವಾಂಟೆಡ್ ನಕ್ಸಲ್ ಶರಣಾಗತಿ!
ಚಿಕ್ಕಮಂಗಳೂರು: ಕಳೆದ ಕೆಲವು ದಿನಗಳ ಹಿಂದೆ ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ 6 ಜನ ನಕ್ಸಲ್ ರು ಬೆಂಗಳೂರಿನ ಗೃಹಕಛೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾಗಿದ್ದರು. ಇದೀಗ ಮತ್ತೊಬ್ಬ ನಕ್ಸಲ್ ರವೀಂದ್ರ ಎನ್ನುವವನು ಇಂದು ನಕ್ಸಲ್ ಕಮಿಟಿ ಎದುರು ಶರಣಾಗಲಿದ್ದಾನೆ ಎಂದು ತಿಳಿದುಬಂದಿದೆ.
ಚಿಕ್ಕಮಂಗಳೂರಿನಲ್ಲಿ ನಕ್ಸಲ್ ರವೀಂದ್ರ ಶರಣಾಗತಿಯಾಗಲಿದ್ದಾನೆ. ಚಿಕ್ಕಮಂಗಳೂರು ಜಿಲ್ಲಾ ಡಳಿತದ ಮುಂದೆ ನಕ್ಸಲ್ ರವೀಂದ್ರ ಶರಣಾಗಲಿದ್ದಾನೆ. ಕಳೆದ 18 ವರ್ಷಗಳಿಂದ ನಕ್ಸಲ್ ರವೀಂದ್ರ ಭೂಗತನಾಗಿದ್ದ. ಇಂದು ಎಸ್ ಪಿ ವಿಕ್ರಂ ಆಮ್ಟೆ, ಡಿಸಿ ವೀಣಾ ನಾಗರಾಜ್ ಮುಂದೆ ಶರಣಾಗಲಿದ್ದಾನೆ.
ಸದ್ಯ ನಕ್ಸಲ್ ಶರಣಾಗತಿ ಕಮಿಟಿ ಜೊತೆಗೆ ರವೀಂದ್ರ ಇದ್ದಾನೆ. ವಿಕ್ರಂ ಗೌಡ ಎನ್ಕೌಂಟರ್ ಬಳಿಕ ರವೀಂದ್ರ ನಾಪತ್ತೆಯಾಗಿದ್ದ ಈತ ಶೃಂಗೇರಿ ತಾಲೂಕಿನ ಕಿಗ್ಗ ಸಮೀಪದ ಕೋಟೆಹೋಂಡ ನಿವಾಸಿ ಎಂದು ತಿಳಿದುಬಂದಿದೆ. ನಕ್ಸಲ್ ಶರಣಾಗತಿ ಕಮಿಟಿ ಶ್ರೀಪಾಲನ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದಾನೆ.