LATEST NEWS
ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ಮೊದಲ ವಾರ ಕೇರಳ ಪ್ರವೇಶಿಸಲಿರುವ ಮುಂಗಾರು

ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ಮೊದಲ ವಾರ ಕೇರಳ ಪ್ರವೇಶಿಸಲಿರುವ ಮುಂಗಾರು
ಮಂಗಳೂರು ಎಪ್ರಿಲ್ 20: ಈ ಬಾರಿ ಮೇ ತಿಂಗಳ ಕೊನೆಯ ವಾರ ಅಥವಾ ಜೂನ್ ಮೊದಲ ವಾರದಲ್ಲಿ ಮುಂಗಾರು ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.
ಪ್ರಸಕ್ತ ಮಳೆಗಾಲದಲ್ಲಿ ದೀರ್ಘಕಾಲಿನ ಸರಾಸರಿಯ ಶೇಕಡ 97 ರಷ್ಟು ಮಳೆಯಾಗಲಿದ್ದು ಇದು ಋತುವಿನ ಸಾಮಾನ್ಯ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಸರಾಸರಿ ಮಳೆಯ ದೀರ್ಘಾವಧಿ ಸರಾಸರಿ ಶೇಕಡ 96 ರಿಂದ 104 ರ ಒಳಗೆ ಇದ್ದರೆ ಮುಂಗಾರನ್ನು ಸಾಮಾನ್ಯ ಮುಂಗಾರು ಎಂದು ಪರಿಗಣಿಸಲಾಗುತ್ತದೆ. ದೀರ್ಘಕಾಲಿನ ಸರಾಸರಿಯ ಶೇಕ 90ಕ್ಕಿಂತ ಕಡಿಮೆ ಮಳೆಯಾದರೆ ಅದು ಕೊರತೆ ಮುಂಗಾರನ್ನು ಸೂಚಿಸುತ್ತದೆ.

ಮುಂಗಾರು ಪ್ರವೇಶ ಕುರಿತಂತೆ ಮೇ ಮಧ್ಯಭಾಗದಲ್ಲಿ ಪ್ರಕಟಣೆ ಹೊರಡಿಸಲಾಗುತ್ತದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಮೇ ಅಂತ್ಯದ ವೇಳೆ ಅಥವಾ ಜೂನ್ ಅವಧಿಯಲ್ಲಿ ಐಎಂಡಿ ವಲಯವಾರು ಮಳೆಯ ಹಂಚಿಕೆಯನ್ನು ಕೂಡ ಪ್ರಕಟಿಸಲಾಗುತ್ತದೆ.