LATEST NEWS
ಮಂಗಳೂರಿನ ಪ್ರಥಮ ತೇಲುವ ಹೋಟೆಲ್ Cruse &Dine ಮುಳುಗಡೆ
ಮಂಗಳೂರಿನ ಪ್ರಥಮ ತೇಲುವ ಹೋಟೆಲ್ Cruse &Dine ಮುಳುಗಡೆ
ಮಂಗಳೂರು ಎಪ್ರಿಲ್ 19: ಮಂಗಳೂರಿನ ಪ್ರಥಮ ತೇಲುವ ಹೋಟೆಲ್ ಮುಳುಗಡೆಗೊಂಡಿದೆ.
ಪ್ರವಾಸಿಗರಿಗೆ ಅತ್ಯಂತ ಆಕರ್ಷಣೆಯ ಕೇಂದ್ರವಾಗಿದ್ದ ಕರಾವಳಿಯ ಪ್ರಥಮ ಕ್ರೂಸ್ ಎಂಡ್ ಡೈನ್ ತೇಲುವ ಹೋಟೆಲ್ ಕಡಲಾಳ ಸೇರಿದೆ.
ನಗರದ ಹಳೆ ಬಂದರಿನಲ್ಲಿ ಲಂಗರು ಹಾಕಿದ್ದ ಕ್ರೂಸ್ ಎಂಡ್ ಡೈನ್ ಬೋಟ್ ಹೋಟೆಲ್ ಏಕಾ ಏಕಿ ಮುಳುಗಡೆಗೊಂಡಿದ್ದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಉದ್ಯಮಿ ಚರಣ್ ಅವರ ಮಾಲಕತ್ವದ ಈ ಬೋಟ್ ಹೋಟೆಲ್ ಮುಳುಗಡೆ ಹೊಂದಿರುವುದಕ್ಕೆ ಕಾರಣ ತಿಳಿದು ಬಂದಿಲ್ಲ.
ಕಡಲ ಮೇಲೆ ತೇಲುತ್ತಾ ಕರಾವಳಿಯ ಪಾರಂಪರಿಕ ಖಾದ್ಯಗಳನ್ನು ಸವಿಯಲು ಕ್ರೂಸ್ ಎಂಡ್ ಡೈನ್ ಪ್ರಸಿದ್ದವಾಗಿತ್ತು.
ಈ ಬೋಟ್ ಹೋಟೆಲ್ ನಲ್ಲಿ ತಣ್ಣನೆಯ ತಂಗಾಳಿಯ ನಡುವೆ ನೀರ ಮೇಲೆ ತೇಲುತ್ತಾ ಮೀನು ಖಾದ್ಯಗಳನ್ನು ಸವಿಯಲು ಪ್ರವಾಸಿಗರು ಮೊದಲೇ ಬುಕ್ಕಿಂಗ್ ಮಾಡುತ್ತಿದ್ದರು. ಆದರೆ ಈಗ ಕ್ರೂಸ್ ಎಂಡ್ ಡೈನ್ ಕಡಲಾಳ ಸೇರಿದೆ.
You must be logged in to post a comment Login