Connect with us

    LATEST NEWS

    ಮನೆ ಹಂಚು ತೆಗೆದು 8 ದಿನದ ಅವಳಿಯನ್ನು ಹೊತ್ತೊಯ್ದ ಕೋತಿ…!!

    ತಂಜಾವೂರು : ಮನೆಯ ಹಂಚನ್ನು ತೆಗೆದು ಮಂಗವೊಂದು ಎಂಟು ದಿನದ ಅವಳಿ ಮಕ್ಕಳನ್ನು ಹೊತ್ತೊಯ್ದ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.


    ತಂಜಾವೂರು ಅರಮನೆ ಪ್ರದೇಶ ಸಮೀಪದಲ್ಲಿರುವ ಮೇಲ ಅಲಗಂ ಎಂಬಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಮಾಹಿತಿ ಪ್ರಕಾರ ವೃತ್ತಿಯಲ್ಲಿ ಪೈಂಟರ್ ಆಗಿರುವ ರಾಜ ಮತ್ತು ಭುವನೇಶ್ವರಿ ಫೆಬ್ರವರಿ 6 ರಂದು ದಂಪತಿಗೆ ಅವಳಿ ಮಕ್ಕಳಾಗಿದೆ. ಶನಿವಾರ ಎಂದಿನಂತೆ ರಾಜ ಅವರು ಕೆಲಸಕ್ಕೆ ತೆರಳಿದ್ದು, ಭುವನೇಶ್ವರ ತನ್ನ 5 ವರ್ಷದ ಮಗಳು ಹಾಗೂ ಅವಳಿ ಮಕ್ಕಳೊಂದಿಗ ಮನೆಯಲ್ಲಿದ್ದರು. ಮಧ್ಯಾಹ್ನ 1.30 ಸುಮಾರಿಗೆ ಭುವನೇಶ್ವರಿ ಅವರು ಹೊರಗಡೆ ತೆರಳಿದ್ದ ಸಂದರ್ಭ ಕೋತಿಗಳ ಕಿರುಚಾಟ ಕೇಳಿದೆ. ಕೂಡಲೇ ತಾಯಿ ಹಿಂದಿರುಗಿದಾಗ ಕೋಣೆಯಲ್ಲಿದ್ದ ಅವಳಿ ಮಕ್ಕಳು ಕಾಣೆಯಾಗಿದ್ದವು, ಮನೆಯ ಹೊರಗಡೆ ತನ್ನ ಮಗು ಅಳುತ್ತಿರುವುದನ್ನು ಕೇಳಿದ ಅವರು ಹೊರಗೆ ಓಡಿ ಬಂದಾಗ  ಒಂದು ಮಂಗ ಮನೆಯ ಮೇಲ್ಛಾವಣಿಯಲ್ಲಿ ಕುಳಿತು ಅವಳಿ ಮಗುವನ್ನು ಹಿಡಿದಿಟ್ಟುಕೊಂಡಿತ್ತು ಎಂದು ಹೇಳಲಾಗಿದೆ.

    ಸಾಂದರ್ಭಿಕ ಚಿತ್ರ

    ಕೂಡಲೇ ಸ್ಥಳೀಯರು ಮಂಗನಿಂದ ಮಗುವನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ ಈ ಸಂದರ್ಭ ಒಂದು ಮಗುವನ್ನ ಮಂಗ ಮೇಲ್ಚಾವಣೆಯಲ್ಲೇ ಬಿಟ್ಟು ಕಾಡಿಗೆ ಓಡಿ ಹೋಗಿದೆ. ನಂತರ ಕಾಣೆಯಾದ ಎರಡನೇ ಮಗುವನ್ನು ಪೊಲೀಸರು ಸ್ಥಳೀಯರು ಹುಡುಕಾಟ ನಡೆಸಿದಾಗ ಮಗು ಅಲ್ಲೆ ಹತ್ತಿರದ ಹೊಳೆಯೊಂದರಲ್ಲಿ ತೇಲುತ್ತಿರುವದನ್ನು ಗುರುತಿಸಿದ್ದಾರೆ. ಕೂಡಲೇ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಗು ಅದಾಗಲೇ ಮೃತಪಟ್ಟಿತ್ತು.

    ಈ ಭಾಗದಲ್ಲಿ ಮಂಗಗಳ ಹಾವಳಿ ಹೆಚ್ಚಾಗಿರುವ ಈಗಾಗಲೇ ವರದಿಯಾಗಿತ್ತು. ಮನೆಯೊಳಗೆ ನುಗ್ಗಿ ಆಹಾರ ಪದಾರ್ಥಗಳನ್ನು ಕದ್ದೊಯ್ದಿರುವ ಘಟನೆಗಳೂ ಆಗಾಗ್ಗೆ ನಡೆಯುತ್ತಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಇದೀಗ ಮಗುವನ್ನು ಹೊತ್ತೊಯ್ದಿರುವುದು ಜನರಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ. ಆದರೆ ವೈದ್ಯರ ಪ್ರಕಾರ ಸಾವನಪ್ಪಿದ ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ. ಅಲ್ಲದೆ 8 ದಿನದ ಮಗುವನ್ನು ಮಗ ಎತ್ತಿದರೆ ಮಗುವಿನ ಮೂಳೆಗಳು ಮರಿಯಬೇಕಾಗಿತ್ತು. ಈ ಪ್ರಕರಣದಲ್ಲಿ ಅಂತಹ ಯಾವುದೇ ಕುರಹು ಕಂಡು ಬಂದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಕೈಗೆತ್ತಿಕೊಂಡರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply