Connect with us

    LATEST NEWS

    ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ವಿಧ್ಯಾರ್ಥಿನಿ

    ಉಡುಪಿ ಫೆಬ್ರವರಿ 14: ಉಡುಪಿಯ ಮಾಹೆ ವಿವಿಯ ಎಂಐಟಿಯ ಹಳೆ ವಿದ್ಯಾರ್ಥಿನಿ ಎಂ.ಎಸ್. ರಶ್ಮಿಸಾಮಂತ್ ಅವರು ಲಂಡನ್ನಿನ ಪ್ರತಿಷ್ಟಿತ ಆಕ್ಸ್‌ಫರ್ಡ್ ವಿವಿಯ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷೆಯಾಗಿ ಆಯ್ಕೆಯಾಗಿ ಇತಿಹಾಸವನ್ನು ಬರೆದಿದ್ದಾರೆ. ಅವರು ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ.


    ಎಂಐಟಿಯಲ್ಲಿ 2016ರಿಂದ 2020ರವರೆಗೆ ಮೆಕ್ಯಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿರುವ ಪ್ರಸ್ತುತ, ಆಕ್ಸ್‌ಫರ್ಡ್ ವಿವಿಯ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್ ಎಂಬ ವಿಷಯದಲ್ಲಿ ಎಂಎಸ್ಸಿ ಪದವಿ ವಿದ್ಯಾರ್ಥಿಯಾಗಿದ್ದಾರೆ.

    ಅವರು ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಿವಿಯ ಪರಿಸರದಲ್ಲಿರುವ ಕ್ರಿಸ್ಟೋಫರ್ ಕೊಡ್ರಿಂಗ್ಟನ್ ಸೇರಿದಂತೆ ಸಾಮ್ರಾಜ್ಯಶಾಹಿಯ ಎಲ್ಲಾ ಪ್ರತಿಮೆಗಳನ್ನು ತೆಗೆದುಹಾಕುವ, ವಿಶ್ವ ಆರೋಗ್ಯ ಸಂಸ್ಥೆಯು ಕೋವಿಡ್ ಸಾಂಕ್ರಾಮಿಕದ ಸಂಪೂರ್ಣ ನಿಯಂತ್ರಣದ ಘೋಷಣೆವರೆಗೆ ವಿದ್ಯಾರ್ಥಿಗಳ ವಲಸೆ ನಿಯಮಗಳನ್ನು ಸಡಿಲಿಸುವ, ಮಾನಸಿಕ ಆರೋಗ್ಯ ಕಾರ್ಯಯೋಜನೆಗೆ ಹೆಚ್ಚಿನ ಹಣಕ್ಕಾಗಿ ಲಾಬಿ ನಡೆಸುವ ಮತ್ತು ಶೀಘ್ರವೇ ಕಾಲೇಜು ಕ್ಯಾಂಪಸಿನಿಂದ ಪರಿಸರಕ್ಕೆ ಮಾರಕ ಇಂಧನಗಳನ್ನು ದೂರ ಮಾಡುವ ನಾಲ್ಕು ಭರವಸೆಗಳನ್ನು ನೀಡಿದ್ದರು.ಚುನಾವಣೆಯಲ್ಲಿ ಒಟ್ಟು 4 ಮಂದಿ ಸ್ಪರ್ಧಿಸಿದ್ದು, ರಶ್ಮಿ ಅವರು ಒಟ್ಟು 3708 ಮತಗಳಲ್ಲಿ 1966 (ಶೇ 53) ಮತಗಳನ್ನು ಗಳಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಅವರು ಗಳಿಸಿದ ಒಟ್ಟು ಮತಗಳು ಇತರ ಮೂರು ಮಂದಿ ಗಳಿಸಿ ಒಟ್ಟು ಮತಗಳಿಗಿಂತಲೂ ಹೆಚ್ಚಾಗಿದ್ದವು.

    Share Information
    Advertisement
    Click to comment

    You must be logged in to post a comment Login

    Leave a Reply