Connect with us

LATEST NEWS

ಇಂದು ಸಂಜೆ 6ಕ್ಕೆ ದೇಶವನ್ನು ಉದ್ದೇಶಿಸಿ ಮೋದಿ ಭಾಷಣ

ನವದೆಹಲಿ, ಅಕ್ಟೋಬರ್  19: ಪ್ರಧಾನಿ ನರೇಂದ್ರ ಮೋದಿ ಇಂದು ಸಂಜೆ 6 ಗಂಟೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 1 ಗಂಟೆ 2 ನಿಮಿಷಕ್ಕೆ ಟ್ವೀಟ್‌ ಮಾಡಿದ ಮೋದಿ ಇಂದು ಸಂಜೆ 6 ಗಂಟೆಗೆ ದೇಶದ ಜನರಿಗೆ ಸಂದೇಶ ನೀಡುತ್ತೇನೆ ಎಂದು ಹೇಳಿದ್ದಾರೆ.

ಈ ಹಿಂದೆ ಕೊರೊನಾ ಲಾಕ್‌ಡೌನ್‌ ಘೋಷಣೆ ಮತ್ತು ವಿಸ್ತರಣೆಯ ಸಮಯದಲ್ಲಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದರು. ಇದಾದ ಬಳಿಕ ದೇಶವನ್ನು ಉದ್ದೇಶಿಸಿ ಟಿವಿ ಮೂಲಕ ಯಾವುದೇ ಭಾಷಣವನ್ನು ಮೋದಿ ಮಾಡಿರಲಿಲ್ಲ.

ಈಗ ಮತ್ತೆ ಯಾವ ವಿಚಾರದ ಬಗ್ಗೆ ಭಾಷಣ ಮಾಡುತ್ತಾರೆ ಎಂಬ ಕುತೂಹಲ ಹೆಚ್ಚಾಗಿದೆ. ಭಾಷಣದಲ್ಲಿ ಹೊಸದಾಗಿ ಆರ್ಥಿಕ ಪ್ಯಾಕೇಜ್‌ ಘೋಷಣೆ ಮಾಡುತ್ತಾರಾ ಎಂಬ ಪ್ರಶ್ನೆ ಎದ್ದಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಸದ್ಯ ಈಗ ಭಾರತದಲ್ಲಿ ಕೊರೊನಾ ದಿನದ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿದೆ. ಈ ವಿಚಾರವನ್ನು ಮೋದಿ ಪ್ರಸ್ತಾಪ ಮಾಡುತ್ತಾರಾ ಎಂಬ ಕುತೂಹಲ ಎದ್ದಿದೆ.