Connect with us

    LATEST NEWS

    ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಚೇಸ್ ಮಾಡಿ ಹಿಡಿದ ಪೊಲೀಸರು…!!

    ಮಂಗಳೂರು ಜನವರಿ 13: ಮೊಬೈಲ್ ಕದ್ದು ಓಡಿ ಹೋಗುತ್ತಿದ್ದ ಕಳ್ಳನನ್ನು ಸಿನೆಮಾ ಮಾದರಿಯಲ್ಲಿ ಚೇಸ್ ಮಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೊಬೈಲ್ ಕದ್ದ ಬಳಿಕ ಓಡಲು ಪ್ರಾರಂಭಿಸಿದ ಕಳ್ಳನನ್ನು ಪೊಲೀಸ್ ಸಿಬ್ಬಂದಿ ಚೇಸ್ ಮಾಡಿ ಹಿಡಿದು ಕೆಳಗೆ ಬಳಿಸುವಲ್ಲಿ ಯಶಸ್ವಿಯಾದರು, ನಂತರ ಕಳ್ಳನನ್ನು ಸ್ಥಳೀಯರ ಸಹಾಯದಿಂದ ಹಿಡಿದಿದ್ದಾರೆ.


    ಕಳ್ಳ ನೆಹರೂ ಮೈದಾನದಲ್ಲಿ ಮಲಗಿದ್ದ ಉತ್ತರ ಭಾರತ ಮೂಲದ ಗ್ರಾನೈಟ್ ಕಾರ್ಮಿಕನೊಬ್ಬನ ಮೊಬೈಲ್ ನ್ನು ಕದ್ದಿದ್ದಾನೆ. ಈ ಸಂದರ್ಭ ಫೋನ್ ಕಳೆದುಕೊಂಡ ವ್ಯಕ್ತಿಯೂ ಕಳ್ಳನ ಹಿಡಿಯಲು ಯತ್ನಿಸಿದ್ದು, ಇದನ್ನು ನೋಡಿದ ಪೋಲೀಸರೂ ಪರಾರಿಯಾಗುತ್ತಿದ್ದ ಕಳ್ಳನ ಹಿಂದೆ ಓಡಿ ಬಂದು ಆತನನ್ನು ಬಂಧಿಸಿದ್ದಾರೆ. ಈ ಸಂಬಂಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply