Connect with us

    FILM

    ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಚಾರ್ಜರ್ – ಪೋಟೋ ವೈರಲ್

    ಬೆಂಗಳೂರು ಡಿಸೆಂಬರ್ 22: ಕನ್ನಡದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್ 10ನೇ ಸೀಸನ್ ಸೂಪರ್ ಹಿಟ್ ಆಗಿದ್ದು, ಜನಪ್ರಿಯತೆಯನ್ನು ಪಡೆದುಕೊಂಡಿದೆ. ಬಿಗ್ ಬಾಸ್ ನ ದೊಡ್ಡ ಅಭಿಮಾನಿಗಳ ಬಳಗವೇ ಕ್ರಿಯೆಟ್ ಆಗಿದ್ದು, ಕೋಪ, ಜಗಳ ಮನೆಯ ತುಂಬ ಹೆಚ್ಚಾಗಿ ಕಾಣಿಸುತ್ತಿದೆ. ಈ ನಡುವೆ ಬಿಗ್ ಬಾಸ್ ಮನೆಯ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಈ ಪೋಟೋದಲ್ಲಿ ಮೊಬೈಲ್ ಚಾರ್ಜರ್ ಗಳು ಕಂಡಿದ್ದು, ಬಿಗ್ ಬಾಸ್ ಮನೆಯಲ್ಲಿ ಮೊಬೈಲ್ ಉಪಯೋಗಿಸುತ್ತಾರಾ ಎಂಬ ಪ್ರಶ್ನೆ ಎದ್ದಿದೆ.


    ವೈರಲ್ ಆಗಿರುವ ಪೋಟೋದಲ್ಲಿ ಸಂಗೀತಾ ಶೃಂಗೇರಿ ಪಕ್ಕ ಇರುವ ಪ್ಲಗ್​ನಲ್ಲಿ ಮೊಬೈಲ್​ ಚಾರ್ಜರ್​ ಸಿಕ್ಕಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡಿದೆ. ಇದನ್ನು ಗಮನಿಸಿದ ವೀಕ್ಷಕರು ಸ್ಕ್ರೀನ್​ ಶಾಟ್​ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೇ, ಇದೀಗ ಚರ್ಚೆ ಶುರುವಾಗಿದೆ. ಅನೇಕರು ದೊಡ್ಮನೆಯಲ್ಲಿ ಸ್ಪರ್ಧಿಗಳು ಕದ್ದು ಮೊಬೈಲ್​ ಬಳಸುತ್ತಿದ್ದಾರಾ? ಎಂಬ ಚರ್ಚೆ ಮಾಡುತ್ತಿದ್ದಾರೆ. ಆದರೆ ಅಸಲಿ ಕಥೆ ಏನು ಗೊತ್ತಾ?.
    ಮೇಲ್ನೋಟಕ್ಕೆ ಸಂಗೀತಾ ಶೃಂಗೇರಿ ಪಕ್ಕ ಮೊಬೈಲ್​ ಚಾರ್ಜರ್​ನಂತೆ ಕಂಡರು. ಖಂಡಿತಾ ಮನೆಯೊಳಗೆ ಮೊಬೈಲ್​ ಅಥವಾ ಸ್ಮಾರ್ಟ್​ಫೋನ್​ ಬಳಕೆಗೆ ಅವಕಾಶವಿಲ್ಲ. ಆದರೆ ಟ್ರಿಮ್ಮರ್​ನಂತಹ ಮುಖ್ಯವಾದ ಗೃಹ ಉಪಯೋಗಿ ಬಳಕೆಯ ವಸ್ತುಗಳ ಬಳಕೆಗೆ ಅವಕಾಶವಿದೆ. ಟ್ರಿಮ್ಮರ್​ ಮತ್ತಿತರ ವಸ್ತುಗಳಿಗೆ ಚಾರ್ಜ್​ ಅವಶ್ಯಕ. ಹಾಗಾಗಿ ಚಾರ್ಜರ್​ ಇಲ್ಲದೆ ಅವನ್ನು ಉಪಯೋಗಿಸಲಾಗುವುದಿಲ್ಲ ಎಂಬುವುದು ಬಹುತೇಕರಿಗೆ ಗೊತ್ತು. ದೃಶ್ಯದಲ್ಲಿ ಕಂಡಂತೆ ಅವು ಟ್ರಿಮ್ಮರ್​ ಚಾರ್ಜರ್​ ಎಂಬದು ಮನದಟ್ಟಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply