Connect with us

LATEST NEWS

ಪ್ರಚೋದಾತ್ಮಕ ಗೋಡೆ ಬರಹ – ಶೀಘ್ರದಲ್ಲೇ ಆರೋಪಿಗಳ ಬಂಧಿಸದಿದ್ದರೆ ಉಗ್ರ ಹೋರಾಟ – ಖಾದರ್ ಎಚ್ಚರಿಕೆ

ಮಂಗಳೂರು, ನವೆಂಬರ್ 29 : ಮಂಗಳೂರು ನಗರದಲ್ಲಿ ಪ್ರಚೋದಾತ್ಮಕವಾಗಿ ಗೋಡೆ ಬರಹಗಳನ್ನು ಬರೆಯುತ್ತಿರುವುದನ್ನು ಕಿಡಿಗೇಡಿಗಳನ್ನು 15 ದಿನಗಳೊಳಗೆ ಬಂಧಿಸದೆ ಇದ್ದರೆ ಜಿಲ್ಲೆಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಶಾಸಕ ಯು.ಟಿ ಖಾದರ್ ಸರಕಾರಕ್ಕೆ ಎಚ್ಚರಿಸಿದ್ದಾರೆ.


ಮಂಗಳೂರಿನಲ್ಲಿ ಮಾತನಾಡಿದ ಅವರು ಮಂಗಳೂರು ನಗರದಲ್ಲಿ ಗೋಡೆ ಬರಹಗಳ ಹಾವಳಿ ಹೆಚ್ಚಾಗಿದ್ದು, ಈ ರೀತಿಯಾಗಿ ಪ್ರಚೋದಾತ್ಮಕವಾಗಿ ಗೋಡೆ ಬರಹ ಬರೆಯುವುದನ್ನು ತೀವ್ರವಾಗಿ ಖಂಡಿಸುತ್ತೇನೆ ಎಂದರು. ಇದನ್ನು ಯಾರೇ ಆದರೂ ಸಹಿಸಲು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಇದರ ಪತ್ತೆ ಬಿಜೆಪಿ ಸರ್ಕಾರ ಹಾಗೂ ಪೊಲೀಸ್‌ ಇಲಾಖೆಯ ಜವಾಬ್ದಾರಿಯಾಗಿದೆ. ಇವರಿಗೆ ಬೆಂಬಲವಾಗಿರುವವರನ್ನು ಶೀಘ್ರವೇ ಪತ್ತೆ ಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಿದೆ. ಇದೆಲ್ಲಾ ನಡೆದರೂ ಕೂಡಾ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಮತ್ತೆ ಮತ್ತೆ ಏಕೆ ಹೀಗೆ ಆಗುತ್ತಿದೆ?”” ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ಸರ್ಕಾರ ಇದ್ದಾಗ ಗೋಡೆ ಬರಹ ಹಾಗೂ ಇನ್ನಿತರ ವಿಚಾರಗಳು ಇರಲಿಲ್ಲ. ಆದರೆ, ಬಿಜೆಪಿ ಸರ್ಕಾರ ಬಂದಾಗ ಸಮಾಜ ದ್ರೋಹಿ ಶಕ್ತಿಗಳಿಗೆ ಧೈರ್ಯ ಬರುತ್ತದೆ. ಇದಕ್ಕೆ ಜಿಲ್ಲೆಯ ಎಂಪಿ, ಎಂಎಲ್‌‌‌ಎಗಳು ಉತ್ತರ ಕೊಡಬೇಕು” ಎಂದು ಒತ್ತಾಯಿಸಿದರು.

Facebook Comments

comments