Connect with us

LATEST NEWS

ಲವ್ ಜಿಹಾದ್ ಕಾನೂನು ಮಾಡೋ ಮುನ್ನ ಯಾರು ಯಾರನ್ನು ಲವ್ ಮಾಡಿದ್ದಾರೆ ನೋಡಿ – ಡಿ.ಕೆ ಶಿವಕುಮಾರ್

ಉಡುಪಿ ನವೆಂಬರ್ 29 :ಲವ್ ಜಿಹಾದ್ ಕಾನೂನು ತರಲು ಮುಂದಾಗಿರುವ ರಾಜ್ಯ ಸರ್ಕಾರವನ್ನು ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಕಾನೂನು ಜಾರಿಗೆ ತರುವ ಮೊದಲು ಕೇಂದ್ರದತ್ತ ಒಮ್ಮೆ ನೋಡಿ. ಯಾವ ಲೀಡರ್ ಮಕ್ಕಳು ಯಾರು ಯಾರನ್ನು ಲವ್ ಮಾಡಿದ್ದಾರೆ ತಿಳ್ಕೊಳ್ಳಲಿ. ಭಾರತ ದೇಶದಲ್ಲಿ ಅವರ ಪ್ರೀತಿ ಅವರ ಹಕ್ಕು. ಧರ್ಮ, ವಿಶ್ವಾಸ, ಮಾನವೀಯತೆ ಎಲ್ಲವೂ ಗೌರವಿಸೋದು ಮುಖ್ಯ ಅಂತ ಹೇಳಿದರು.


ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶಕ್ಕೆ ನಗರಕ್ಕೆ ಬಂದಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ಲವ್ ಜಿಹಾದ್’ ಮತ್ತು ‘ಗೋಹತ್ಯೆ ನಿಷೇಧ’ದ ಬಗ್ಗೆ ಮಾಧ್ಯಮ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ”ಗೋಹತ್ಯೆ ನಿಷೇಧ ಮಸೂದೆ ಹೊಸತೇನಲ್ಲ. ಇದು ಬಹಳ ಹಿಂದಿನಿಂದಲೂ ಅಸ್ತಿತ್ವದಲ್ಲಿದೆ. ‘ಲವ್ ಜಿಹಾದ್’ಗೆ ಸಂಬಂಧಿಸಿದಂತೆ ರಾಷ್ಟ್ರೀಯ ನಾಯಕರುಗಳು ನಿರ್ಧಾರ ಕೈಗೊಳ್ಳಬೇಕು. ಲವ್‌ ಜಿಹಾದ್‌ ಕಾನೂನು ತರುವ ಮುನ್ನ ಯಾವ ನಾಯಕರ ಮಕ್ಕಳು ಯಾರನ್ನು ವಿವಾಹವಾಗಿದ್ದಾರೆ ನೋಡಲಿ” ಎಂದು ಬಿಜೆಪಿ ನಾಯಕರುಗಳಿಗೆ ಟಾಂಗ್‌ ನೀಡಿದರು.


ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಎನ್‌‌.ಆರ್‌ ಸಂತೋಷ್‌ ಆತ್ಮಹತ್ಯೆಗೆ ಯತ್ನಕಾರಣವಾದ ‘ವಿಡಿಯೋ’ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ಈ ಬಗ್ಗೆ ಎಲ್ಲಿಯೂ ಮಾತನಾಡಲಿಲ್ಲ. ನನ್ನ ಸ್ನೇಹಿತರೊಬ್ಬರು ಅದನ್ನು ನನಗೆ ಕಳುಹಿಸಿದ್ದಾರೆ. ಹಿಂದಿನ ರಾಜಕೀಯ ಕಾರ್ಯದರ್ಶಿ ರಾಜೀನಾಮೆ ನೀಡಿದರು ನಂತರ ಇನ್ನೊಬ್ಬರನ್ನು ಹುದ್ದೆಯಿಂದ ವಜಾ ಮಾಡಲಾಯಿತು” ಎಂದು ಸ್ಪಷ್ಟನೆ ನೀಡಿದರು.

Facebook Comments

comments