Connect with us

LATEST NEWS

ಗೆಳೆಯನೊಂದಿಗೆ ಲೈಂಗಿಕ ಕ್ರಿಯೆ..ಮನೆಯಲ್ಲಿ ಗ್ಯಾಂಗ್ ರೇಪ್ ಅಂದ ಅಪ್ರಾಪ್ತೆ

ರಾಯ್ಪುರ: ಗೆಳೆಯನ ಜೊತೆ ಸುತ್ತಾಡಿ ಲೈಂಗಿಕ ಕ್ರಿಯೆ ನಡೆಸಿ ಮನೆಗೆ ಬರೋದು ತಡವಾಗಿದ್ದರಿಂದ ಅಪ್ರಾಪ್ತೆ ತನ್ನ ಮೇಲೆ ಗ್ಯಾಂಗ್‍ರೇಪ್ ಆಗಿದೆ ಎಂದು ಸುಳ್ಳು ಕಥೆ ಕಟ್ಟಿರುವ ಪ್ರಕರಣ ಛತ್ತೀಸಗಢದ ಕವರ್ಡಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. 14 ವರ್ಷದ ಬಾಲಕಿಯೊಬ್ಬಳು ಮಾಡಿದ ಎಡವಟ್ಟಿನಿಂದಾಗಿ ಪೊಲೀಸರ ಅಮೂಲ್ಯ ಸಮಯ ವ್ಯರ್ಥವಾಗಿದ್ದೂ ಅಲ್ಲದೇ, ಬಾಲಕಿಯ ಪಾಲಕರು ಸಮಾಜದ ಮುಂದೆ ತಲೆತಗ್ಗಿಸುವಂಥಾಗಿದೆ.


ಈ ಘಟನೆ ನಡೆದದ್ದು ನವೆಂಬರ್ 22ರಂದು. ಸ್ನೇಹಿತೆಯರನ್ನು ಭೇಟಿಯಾಗಿ ಬರುವುದಾಗಿ ಹೇಳಿ ಹೋಗಿದ್ದಳು ಬಾಲಕಿ. ರಾತ್ರಿ 11 ಗಂಟೆಯಾದರೂ ಮನೆಗೆ ಬರಲಿಲ್ಲ. ಎಲ್ಲೆಡೆ ಹುಡುಕಾಡಿದ ಪಾಲಕರು ಹೆದರಿ ರಾತ್ರಿ 11.30ಕ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಮನೆಗೆ ಬರುವಷ್ಟರಲ್ಲಿ ಬಾಲಕಿ ಬಂದಿದ್ದಳು.


ಗಾಬರಿಯಿಂದ ಪಾಲಕರು ಇಷ್ಟು ತಡರಾತ್ರಿ ಏಕಾಯಿತೆಂದು ಕೇಳಿದಾಗ ಗ್ಯಾಂಗ್​ರೇಪ್​ ಆಗಿರುವುದಾಗಿ ಹೇಳಿದಳು. ಅವಳನ್ನು ಗಮನಿಸಿದಾಗಲೂ ಅಸ್ತವ್ಯಸ್ತವಾಗಿದ್ದರಿಂದ ಪಾಲಕರು ಗಾಬರಿಗೊಂಡರು. ಮಗಳು ವಾಪಸ್​ ಆಗಿರುವ ಬಗ್ಗೆ ಪೊಲೀಸರಿಗೆ ತಿಳಿಸಿ ಗ್ಯಾಂಗ್​ರೇಪ್​ ಆಗಿರುವ ಬಗ್ಗೆ ಹೇಳಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪೊಲೀಸರು ಏಳು ತಂಡಗಳನ್ನು ರಚಿಸಿ ತನಿಖೆ ಕೈಗೊಂಡರು. ಆಕೆ ಹೋಗಿದ್ದೇನೆ ಎಂದಿದ್ದ ಸ್ನೇಹಿತೆಯರನ್ನೆಲ್ಲಾ ವಿಚಾರಿಸಿದಾಗ, ಅವಳು ತಮ್ಮಲ್ಲಿ ಬಂದಿಲ್ಲ ಎಂದು ಹೇಳಿದರು.

ಬಾಲಕಿಯ ಗೆಳೆಯನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಇಬ್ಬರ ಹೇಳಿಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಅನುಮಾನದ ಮೇಲೆ ಪೊಲೀಸರು ಬಾಲಕಿ ಮತ್ತು ಆಕೆಯ ಗೆಳೆಯನ ವಿಚಾರಣೆ ತೀವ್ರಗೊಳಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.
ಪಿಜಿ ಕಾಲೇಜು ಬಳಿ ಭೇಟಿಯಾದ ಇಬ್ಬರು ಮಾತುಕತೆ ನಡೆಸಿದ್ದಾರೆ. ನಂತರ ಲೈಂಗಿಕ ಸಂಪರ್ಕ ಹೊಂದಿದ್ದಾರೆ. ಮನೆಗೆ ಹೋಗಲು ತಡವಾಗಿದ್ದರಿಂದ ಯುವಕ ಆಕೆಗೆ ಗ್ಯಾಂಗ್‍ರೇಪ್ ಆಗಿದೆ ಎಂದು ಸುಳ್ಳು ಹೇಳುವಂತೆ ಹೇಳಿದ್ದಾನೆ. ಬಾಲಕಿ ಸಹ ಮನೆಗೆ ಬಂದು ತನ್ನ ಮೇಲೆ ಗ್ಯಾಂಗ್‍ರೇಪ್ ಆಗಿದೆ ಎಂದು ಹೇಳಿದ್ದಳು. ಘಟನೆ ಸಂಬಂಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದ್ದು, ಅಪ್ರಾಪ್ತೆ ಜೊತೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದ್ದರಿಂದ ಯುವಕನನ್ನು ಬಂಧಿಸಲಾಗಿದೆ.

Facebook Comments

comments