Connect with us

    FILM

    ಮಿಸ್ ಇಂಡಿಯಾ ವರ್ಲ್ಡ್ 2022 ಕಿರೀಟ ಮುಡಿಗೇರಿಸಿದ ಉಡುಪಿಯ ಸಿನಿ ಶೆಟ್ಟಿ

    ಮುಂಬೈ ಜುಲೈ 04: 71ನೇ ವಿಶ್ವಸುಂದರಿ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರಮುಖ ಘಟ್ಟವಾಗಿದ್ದ ಮಿಸ್ ಇಂಡಿಯಾ ವರ್ಲ್ಡ್ 2022 ಕಿರೀಟವನ್ನು ಉಡುಪಿ ಮೂಲದ ಸಿನಿ ಶೆಟ್ಟಿ ಮುಡಿಗೇರಿಸಿಕೊಂಡಿದ್ದಾರೆ.

    ಕರ್ನಾಟಕ ಮೂಲದ 21 ವರ್ಷದ ಸಿನಿ ಶೆಟ್ಟಿ ಜುಲೈ 3 ರಂದು(ಭಾನುವಾರ) ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾದ ಗ್ರ್ಯಾಂಡ್ ಫಿನಾಲೆಯಲ್ಲಿ ಫೆಮಿನಾ ಮಿಸ್ ಇಂಡಿಯಾ 2022 ಪ್ರಶಸ್ತಿಯನ್ನು ಗೆದ್ದಿದ್ದಾರೆ.


    ರಾಜಸ್ಥಾನದ ರೂಬಲ್ ಶೆಖಾವತ್ ಮಿಸ್ ಇಂಡಿಯಾ 2022ರ ಮೊದಲ ರನ್ನರ್ ಅಪ್ ಆದರೆ, ಉತ್ತರ ಪ್ರದೇಶದ ಶಿನಾತಾ ಚೌಹಾನ್ ಅವರು ಮಿಸ್ ಇಂಡಿಯಾ 2022 ಎರಡನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ. ಫೆಮಿನಾ ಮಿಸ್ ಇಂಡಿಯಾ 2021ರ ಮಾನಸ ವಾರಣಾಸಿ ಮಿಸ್ ಇಂಡಿಯಾ 2022 ಸಿನಿ ಶೆಟ್ಟಿಗೆ ಕಿರೀಟವನ್ನು ಮುಡಿಗೇರಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply