Connect with us

FILM

ಸೀರೆಯಲ್ಲಿ ಮಿಂಚಿದ ಆಸ್ಟ್ರೇಲಿಯಾ ನೀರೆ, ರ‍್ಯಾಂಪ್‌ ವಾಕ್​​ ಮಾಡಿದ ಮಿಸ್ ಆಸ್ಟ್ರೇಲಿಯಾ ವಿಡಿಯೋ ವೈರಲ್ 

ಮುಂಬೈ : ಸಭ್ಯತೆ ಮತ್ತು ಸಂಸ್ಕೃತಿಗೆ  ಹೆಸರಾದ ಉಡುಗೆ ಭಾರತೀಯ ಸೀರೆಗೆ ವಿಶ್ವದಲ್ಲೇ ವಿಶಿಷ್ಟ ಸ್ಥಾನ ಮತ್ತು ಗೌರವವಿದೆ. ಇದೀಗ  ವಿಶ್ವ ಸುಂದರಿ ಸ್ಪರ್ಧೆಗೆ ಸ್ಪರ್ಧಿಸುತ್ತಿರುವ  ಮಿಸ್ ಆಸ್ಟ್ರೇಲಿಯಾ   ಸಂಸ್ಕೃತಿಯ ಪ್ರತೀಕವಾಗಿರುವ ಸೀರೆ ಉಟ್ಟು ಪ್ರತಿಷ್ಠಿತ ಮಿಸ್ ವರ್ಲ್ಡ್ 2024 ರಲ್ಲಿ ರ‍್ಯಾಂಪ್‌ ವಾಕ್​​​ ಮಾಡಿ  ಸುದ್ದಿ ಮಾಡಿದ್ದಾರೆ.

ಭಾರತೀಯ ಹೆಣ್ಣುಮಕ್ಕಳಿಗೆ ಸೀರೆ ಮೇಲೆ ವಿಶೇಷ ಒಲವು. ಆದರೆ ಇದೀಗ ಸೀರೆಯಲ್ಲಿ ಆಸ್ಟ್ರೇಲಿಯಾದ ನೀರೆ ಮಿಂಚಿದ್ದು ವಿದೇಶಿಗರ ಸೀರೆಯೊಂದಿನ ವಿಶೇಷ ನಂಟು ಸಾಕಷ್ಟು ಮೆಚ್ಚುಗೆಗೆ ಕಾರಣವಾಗಿದೆ. ಅದೇ ಸಂದರ್ಭದಲ್ಲಿ ಭಾರತೀಯ ಪ್ರತಿನಿಧಿ ಸಿನಿ ಶೆಟ್ಟಿ ಸಂಪ್ರದಾಯಿಕ ಲೆಹಾಂಗ​​​ ತೊಟ್ಟು ರ‍್ಯಾಂಪ್‌ ವಾಕ್​​ ಮಾಡಿದ್ದಾರೆ.ವಿಶ್ವ ಸುಂದರಿ 2024 ರ ಪ್ರತಿಷ್ಠಿತ ವೇದಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯತೆಯನ್ನು ಪ್ರದರ್ಶಿಸುವ ಸುತ್ತಿನಲ್ಲಿ ಮಿಸ್ ಆಸ್ಟ್ರೇಲಿಯ ಸೀರೆಯುಟ್ಟು ರ‍್ಯಾಂಪ್  ನಲ್ಲಿ  ಹೆಜ್ಜೆ ಹಾಕಿದ್ದು  ಸಾಂಸ್ಕೃತಿಕ ಗೌರವ ಮತ್ತು ಜಾಗತಿಕ ಏಕತೆಯ ಬಗ್ಗೆ ಪ್ರಬಲ ಸಂದೇಶವನ್ನು ರವಾನಿಸಿದೆ. ಇದಲ್ಲದೇ ವಿಶೇಷವಾಗಿ ತಮ್ಮದೇ ಆದ ಸಂಪ್ರದಾಯಗಳನ್ನು ಅಳವಡಿಸಿಕೊಳ್ಳಲು ಹಿಂಜರಿಯುವ ಭಾರತೀಯ ಯುವ ಪೀಳಿಗೆಗೆ ಉತ್ತಮ ಸಂದೇಶವಾಗಿದೆ. ಸದ್ಯ ಸಾಮಾಜಿಕ ಜಾಲ ತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *