DAKSHINA KANNADA
ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ನೆರವು

ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ನೆರವು
ಪುತ್ತೂರು ಎಪ್ರಿಲ್ 21: ಪುತ್ತೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಲಸೆ ಕಾರ್ಮಿಕರಾಗಿ ದುಡಿಯುತ್ತಿದ್ದ ಹಾವೇರಿ,ಗದಗ ಮೊದಲಾದ ಭಾಗದ 38 ಜನರಿಗೆ ಪುತ್ತೂರಿನ ಬಿಸಿಎಮ್ ಹಾಸ್ಟೆಲ್‌ನಲ್ಲಿ ವಸತಿ ಕಲ್ಪಿಸಲಾಗಿದೆ.
ಹಾಸ್ಟೇಲ್ ನಲ್ಲೇ ಈ ಕಾರ್ಮಿಕರಿಗೆ ಊಟ-ತಿಂಡಿಯ ವ್ಯವಸ್ಥೆಯನ್ನು ಪುತ್ತೂರು ತಾಲೂಕು ಆಡಳಿತದಿಂದ ವ್ಯವಸ್ಥೆ ಮಾಡಲಾಗಿದೆ. 9 ಮಕ್ಕಳು ಕೂಡಾ ಇಲ್ಲೇ ಉಳಿದಿದ್ದು,ಮಕ್ಕಳಿಗೆ ಬೇಕಾದ ಹಾಲಿನ ಪೂರೈಕೆಯನ್ನೂ ಸ್ಥಳಿಯಾಡಳಿತ ಮಾಡಿದೆ.
