ವಿಷ ಸೇವಿಸಿ ಆತ್ಮಹತ್ಯೆ ಯುವತಿ ಆತ್ಮಹತ್ಯೆ ಮಾಡಿಕೊಂಡ ನರ್ಸಿಂಗ್ ವಿಧ್ಯಾರ್ಥಿನಿ

ಸುಳ್ಯ ಎಪ್ರಿಲ್ 21: ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನರ್ಸಿಂಗ್ ಕಲಿಯುತ್ತಿದ್ದ ವಿದ್ಯಾರ್ಥಿನಿ ಯೋರ್ವಳು ವಿಷ ಸೇವಿಸಿ ಆತ್ಮಹತ್ಯೆ ಗೈದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕು ಬಾಳುಗೋಡಿನಲ್ಲಿ ನಡೆದಿದೆ.

20 ವರ್ಷದ ವಿನುತಾ ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದಾಳೆ. ಬಾಳುಗೋಡಿನ ಉಪ್ಪುಕಳ ನಿವಾಸಿಯಾಗಿರುವ ವಿನುತಾ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೂರನೇ ವರ್ಷದ ನರ್ಸಿಂಗ್ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿಯಾಗಿದ್ದಾಳೆ. ರಾಜ್ಯದಲ್ಲಿ ಕರೋನಾ ವೈರಸ್ ರೋಗದ ಪ್ರಯುಕ್ತ ನರ್ಸಿಂಗ್ ತರಬೇತಿಗೆ ರಜೆ ನೀಡಿದ್ದ ಕಾರಣ ಮನೆಗೆ ಬಂದಿದ್ದ ಯುವತಿ ರಾತ್ರಿ ವೇಳೆ ತನ್ನ ಮನೆಯಲ್ಲಿ ಇಲಿ ಪಾಷಾಣ ಸೇವಿಸಿ ಅಸ್ವಸ್ಥಗೊಂಡಿದ್ದಾಳೆ.

ಕೂಡಲೇ ಮನೆಯವರು ವಿನುತಾಳನ್ನು ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲು ಮಅಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿನುತಾ ಸಾವನ್ನಪಿದ್ದಾಳೆ.ವಿನುತಾಳ ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.