Connect with us

    LATEST NEWS

    ಮನೆ ಮೇಲೆ ಬಿದ್ದ ವಿದ್ಯುತ್ ತಂತಿ ಮನೆ ಭಾಗಶಃ ಸುಟ್ಟು ಭಸ್ಮ

    ಮನೆ ಮೇಲೆ ಬಿದ್ದ ವಿದ್ಯುತ್ ತಂತಿ ಮನೆ ಭಾಗಶಃ ಸುಟ್ಟು ಭಸ್ಮ

    ಉಡುಪಿ ಅಗಸ್ಟ್ 17: ವಿದ್ಯುತ್ ತಂತಿಯೊಂದು ಮನೆಯ ಮೇಲೆ ಬಿದ್ದು ಮನೆ ಭಾಗಶಃ ಸುಟ್ಟು ಕರಕಲಾದ ಘಟನೆ ಉಡುಪಿ ಬ್ರಹ್ಮಾವರದ ಹೇರಾಡಿಯಲ್ಲಿ ನಡೆದಿದೆ.

    ಮಹಮ್ಮದ್ ಎಂಬವರಿಗೆ ಸೇರಿದ ಮನೆ ಇದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ವಿದ್ಯುತ್ ಹರಿಯುತ್ತಿದ್ದ ತಂತಿ ಬಿದ್ದೊಡನೆ ಭಾಗಶಃ ಮನೆ ಸುಟ್ಟು ಭಸ್ಮವಾಗಿದೆ.

    ಮನೆಯ ಕೊಠಡಿಗಳು, ಮನೆಯೊಳಗಿದ್ದ ಸೊತ್ತು ಸುಟ್ಟು ಕರಕಲಾಗಿದೆ. ವಿದ್ಯುತ್ ಶಾಕ್ ಗೆ ಗೋಡೆಗಳು ಬಿರುಕುಬಿಟ್ಟದೆ. ಫ್ರಿಡ್ಜ್- ವಾಷಿಂಗ್ ಮಷಿನ್ ಸುಟ್ಟು ಕರಕಲಾಗಿದೆ.

    ಅವಘಡ ನಡೆದು ಗಂಟೆಗಳು ಕಳೆದರೂ ಅಗ್ನಿಶಾಮಕ ದಳ ಸ್ಥಳಕ್ಕೆ ಬರಲು ವಿಳಂಬವಾಗಿದೆ. ಸ್ಥಳೀಯರೇ ಬೆಂಕಿ ಹತೋಟಿಗೆ ತಂದಿದ್ದಾರೆ. ಘಟನೆಯಲ್ಲಿ ಸುಮಾರು ಆರು ಲಕ್ಷ ರುಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.

    ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮನೆಯ ಒಟ್ಟು ನಷ್ಟ ಮತ್ತು ಅವಘಡಕ್ಕೆ ಕಾರಣ ಏನು ಅಂತ ಮೆಸ್ಕಾಂ ಮತ್ತು ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply